ನವದೆಹಲಿ : ಚೀನಾದಿಂದ ಆಮದು ಮಾಡಿಕೊಂಡ ಕೊರೋನಾ ಟೆಸ್ಟಿಂಗ್ ಕಿಟ್ಗಳು ದೋಷಪೂರಿತವಾಗಿವೆ ಮತ್ತು ಅವುಗಳಲ್ಲಿ ಬರುವ ಪರೀಕ್ಷಾ ಫಲಿತಾಂಶಗಳು ಸರಿಯಾಗಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಅವುಗಳ ಬಳಕೆ ಮತ್ತು ಕಾಯ್ದಿರಿಸಲಾದ ಹೆಚ್ಚುವರಿ ಕಿಟ್ಗಳ ಆಮದು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಮತ್ತು ಚೀನಾಗೆ ಹಿಂದಕ್ಕೆ ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಈ ಬಗ್ಗೆ ಮಹತ್ವದ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಐಸಿಎಂಆರ್ನ ಮುಖ್ಯಸ್ಥ ಬಲರಾಮ ಭಾರ್ಗವ ಅವರು, ಕಾಯ್ದಿರಿಸಲಾಗಿರುವ ಕಿಟ್ಗಳ ಆಮದು ಪ್ರಕ್ರಿಯೆಯನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ವಾರವಷ್ಟೇ ಚೀನಾದಿಂದ ಟೆಸ್ಟಿಂಗ್ ಕಿಟ್ಗಳನ್ನು ಭಾರತ ಆಮದು ಮಾಡಿಕೊಂಡಿತ್ತು. ಅಲ್ಲದೆ ಅವುಗಳನ್ನು ದೇಶದ ಬೇರೆ ಬೇರೆ ರಾಜ್ಯಗಳಿಗೆ ಕೊರೋನಾ ಟೆಸ್ಟ್ ನಡೆಸುವ ಸಲುವಾಗಿ ನೀಡಲಾಗಿತ್ತು. ಆದರೆ ಈ ಟೆಸ್ಟಿಂಗ್ ಕಿಟ್ಗಳ ನಿಖರವಾಗಿ ಫಲಿತಾಂಶ ನೀಡದೇ ಇರುವ ಹಿನ್ನೆಲೆಯಲ್ಲಿ, ಅವುಗಳನ್ನು ದೋಷಪೂರಿತವಾಗಿವೆ ಎಃದು ಪರಿಗಣಿಸಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಜೊತೆಗೆ ಈ ಹಿಂದೆಯೂ ಹಲವು ರಾಷ್ಟ್ರಗಳು ಚೀನಾ ನಿರ್ಮಿತ ಟೆಸ್ಟಿಂಗ್ ಕಿಟ್ಗಳ ದೋಷಪೂರಿತವಾಗಿದ್ದು, ಚೀನಾದಿಂದ ಮಹಾ ಮೋಸ ನಡೆದಿದೆ ಎಂದೂ ಆರೋಪಿಸಿದ್ದವು. ದೇಶದಲ್ಲಿ ರಾಜಸ್ಥಾನ ಸರ್ಕಾರ ಈ ಕುರಿತಂತೆ ಮೊದಲು ದೂರು ನೀಡಿತ್ತು.
ಇನ್ನು ಕಿಟ್ಗಳ ಬೆಲೆಯ ವಿಚಾರದಲ್ಲಿಯೂ ಮೋಸ ನಡೆದಿರುವ ಬಗ್ಗೆ ವಿಪಕ್ಷಗಳು ಆರೋಪಿಸಿದ್ದವು. 254 ರೂ. ಮೌಲ್ಯದ ಕಿಟ್ಗಳನ್ನು 600 ರೂ. ಗಳಿಗೆ ಮಾರಲಾಗಿದೆ ಎಂಬ ಆರೋಪಕ್ಕೆ ಉತ್ತರ ನೀಡಿರುವ ಕೇಂದ್ರ, ಗ್ಯಾಂಗ್ ಜೌ ಕಂಪನಿ ಸಂಪೂರ್ಣ ಹಣವನ್ನು ಮೊದಲೇ ಪಾವತಿಸುವಂತೆ ತಿಳಿಸಿತ್ತು. ಅದರಂತೆ ಒಪ್ಪಂದವನ್ನು ನಡೆಸಲಾಗಿದ್ದಾಗಿಯೂ ಮಾಹಿತಿ ನೀಡಿದೆ. ಭಾರತ ಚೀನಾದ ಪ್ರಸಿದ್ಧ ಕಂಪನಿಗಳಾದ ಝಹಾಯ್ ಲಿವ್ಜಾನ್ ಡಯಗ್ನಾಸ್ಟಿಕ್ ಮತ್ತು ಗ್ಯಾಂಗ್ ಜೌ ವಂಡ್ ಪೊ ಬಯೋಟೆಕ್ಗಳೊಂದಿಗೆ ಕಿಟ್ ಖರೀದಿಗೆ ಒಪ್ಪಂದನ್ನು ಮಾಡಿಕೊಂಡಿತ್ತು.
ಕಿಟ್ಗಳ ತನಿಖೆಗೆ ಐಸಿಎಂಆರ್ ಕೆಲವು ರಾಜ್ಯಗಳಿಗೆ ತನ್ನ ತಜ್ಞರ ತಂಡವನ್ನು ಕಳುಹಿಸಿ, ಅದರ ಸಾಮರ್ಥ್ಯ, ಫಲಿತಾಂಶ ನಿಖರತೆ ಬಗ್ಗೆ ತನಿಖೆಯನ್ನೂ ನಡೆಸಿದ್ದು, ಅವುಗಳು ದೋಷಪೂರಿತವಾಗಿವೆ. ಅವುಗಳನ್ನು ಬಳಕೆ ಮಾಡದಂತಯೂ ಈಗಾಗಲೇ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.