ಬೆಂಗಳೂರು: ಪಿಪಿಇ ಕವರಲ್ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವು ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚಾಗಿದ್ದು, ಬೆಂಗಳೂರು ಇದರ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಒಟ್ಟು ಪಿಪಿಇ ಉತ್ಪಾದನೆಯ ಶೇಕಡಾ 50 ಕ್ಕಿಂತ ಹೆಚ್ಚು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರಲ್ಲದೇ, ತಮಿಳುನಾಡಿನ ತಿರುಪುರ್, ಚೆನ್ನೈ ಮತ್ತು ಕೊಯಮತ್ತೂರು, ಅಹಮದಾಬಾದ್ ಮತ್ತು ಗುಜರಾತ್ನ ವಡೋದರಾ, ಪಂಜಾಬ್ನ ಫಾಗ್ವಾರಾ ಮತ್ತು ಲುಧಿಯಾನ, ಮಹಾರಾಷ್ಟ್ರದ ಕುಸುಮ್ನಗರ, ಭಿವಾಂಡಿ, ರಾಜಸ್ಥಾನ, ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ಹಲವು ಪ್ರದೇಶಗಳಲ್ಲಿ ಇದರ ಉತ್ಪಾದನೆಯಾಗುತ್ತಿದೆ.
ಮೊದಲು ತಯಾರಿಸಿದ ಪಿಪಿಇಗಳನ್ನು ಕಳುಹಿಸಿಕೊಡಲಾಗಿದೆ ಮತ್ತು ನಂತರ ಅಗತ್ಯತೆಯ ಆಧಾರದ ಮೇಲೆ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜವಳಿ ಮತ್ತು ಔಷಧ ಇಲಾಖೆಯು ಸರಬರಾಜು ಸರಪಳಿಯನ್ನು ಸುಗಮಗೊಳಿಸಲು ಮತ್ತು ಪಿಪಿಇಗಳ ವರ್ಧಿತ ಉತ್ಪಾದನೆಗೆ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲು ಕೈಗಾರಿಕಾ ಸಂಸ್ಥೆಗಳು, ಮಧ್ಯಸ್ಥಗಾರರು ಮತ್ತು ತಯಾರಕರೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ.
COVID-19 ರ ಹರಡುವಿಕೆಯನ್ನು ತಡೆಯಲು ಲಾಕ್ಡೌನ್ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಈ ಮಧ್ಯೆಯೇ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಪಿಪಿಇಗಳ ದೇಶೀಯ ಉತ್ಪಾದನೆ ಒಂದು ಪ್ರಮುಖ ಉತ್ತೇಜನವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.