ಶ್ರೀನಗರ: ಮಾರಣಾಂತಿಕ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಲವು ಸ್ಫೂರ್ತಿದಾಯಕ ಗೀತೆಗಳನ್ನು ರಚನೆ ಮಾಡಿರುವ ಜಮ್ಮು-ಕಾಶ್ಮೀರದ ಇಬ್ಬರು ಬಾಲಕಿಯರು ಈಗ ಕೊರೋನಾ ವಾರಿಯರ್ಸ್ ಆಗಿ ಹೊರಹೊಮ್ಮಿದ್ದಾರೆ.
ಅವಳಿ ಸಹೋದರಿಯರಾಗಿರುವ ಸೈಷ ಮತ್ತು ಸೈಬಾ ಗುಪ್ತಾ ಶಾಲೆಗೆ ಹೋಗುವ ಬಾಲಕಿಯರಾಗಿದ್ದಾರೆ. ಈಗಾಗಲೇ ಅವರು ಸಾಮಾಜಿಕ ಅಂತರದ ಮಹತ್ವವನ್ನು ಸಾರುವ ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಗೀತೆಗಳನ್ನು ರಚನೆ ಮಾಡಿದ್ದಾರೆ.
ಮಕ್ಕಳ ಸ್ಫೂರ್ತಿದಾಯಕ ಕಾರ್ಯಕ್ಕೆ ಎಲ್ಲಾ ಕಡೆಯಿಂದಲೂ ಸಾಧನೆಗಳು ವ್ಯಕ್ತವಾಗುತ್ತಿದೆ ಮತ್ತು ಇವರನ್ನು ಕೊರೋನಾ ವಾರಿಯರ್ಸ್ ಎಂದು ಕರೆಯಲಾಗಿದೆ.
ಇದುವರೆಗೆ ಬಾಲಕಿಯರು ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ 4 ಗೀತೆಗಳನ್ನು ರಚನೆ ಮಾಡಿದ್ದಾರೆ. ಈ ಗೀತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮ್ಮ ಗೀತೆಗಳ ಮೂಲಕ ಈ ಮಕ್ಕಳು ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಜನರಿಗೆ ಸಂದೇಶವನ್ನು ನೀಡಿದ್ದಾರೆ. ಸಾಮಾಜಿಕ ಅಂತರವನ್ನು ಪಾಲನೆ ಮಾಡುವ ಮೂಲಕ ವೈರಸ್ ಅನ್ನು ಸೋಲಿಸುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ನಮಗೆ ಗೀತರಚನೆ ಮಾಡಲು ಪ್ರೇರಣೆ ಎಂದು ಬಾಲಕಿಯರು ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಕೂಡ ಈ ಬಾಲಕಿಯರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಏಪ್ರಿಲ್ 16 ರಂದು ಮೋದಿ ಈ ಬಾಲಕಿಯರ ವಿಡಿಯೋ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
“ಸೈಬಾ ಮತ್ತು ಸೈಷಾ ಗುಪ್ತಾ ಪುಟಾಣಿ ಸಹೋದರಿಯರ ಬಗ್ಗೆ ಹೆಮ್ಮೆಯಿದೆ. ಕೊರೋನಾವೈರಸ್ ಸೋಲಿಸುವ ಬಗ್ಗೆ ಅವರು ಜಾಗೃತಿಯನ್ನು ಮೂಡಿಸುತ್ತಿದ್ದಾರೆ” ಎಂದು ಮೋದಿ ಟ್ವೀಟ್ ಮಾಡಿದ್ದರು.
Proud of youngsters like Saibaa and Saisha Gupta. They are raising awareness on defeating Coronavirus.
Have a look at this video. pic.twitter.com/95iJ5D61wh
— Narendra Modi (@narendramodi) April 16, 2020
ಈ ಬಾಲಕಿಯರ ತಂದೆ-ತಾಯಿ ವೈದ್ಯರಾಗಿದ್ದು, ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರು ಅವಿರತ ಹೋರಾಟ ನಡೆಸುತ್ತಿರುವ ಬಗ್ಗೆಯೂ ಬಾಲಕಿಯರು ತಮ್ಮ ಗೀತೆಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆಯ ಬಗ್ಗೆಯೂ ಇವರು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.