ನವದೆಹಲಿ : ಕೊರೋನಾ ಚಿಕಿತ್ಸೆಗೆ ಕ್ರಿಮಿನಾಶಕ ಚುಚ್ಚುಮದ್ದುಗಳನ್ನು ಬಳಕೆ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಅಪಾಯಕಾರಿ ಆದೇಶದ ಬೆನ್ನಲ್ಲೇ, ಲೈಝಾಲ್, ಡೆಟಾಲ್ನಂತಹ ಕ್ರಿಮಿ ನಿವಾರಕ ಉತ್ಪನ್ನಗಳ ತಯಾರಕರಾದ ರೆಕಿಟ್ ಬೆನ್ಕಿಸರ್ ಸಂಸ್ಥೆ ಈ ಕ್ರಮವನ್ನು ಅಳವಡಿಸಿಕೊಳ್ಳದಂತೆ ತಿಳಿಸಿದೆ. ಇಂತಹ ಚುಚ್ಚುಮದ್ದುಗಳ ಬಳಕೆಯಿಂದ ಮಾನವನ ಜೀವಕ್ಕೆ ದುಷ್ಪರಿಣಾಮ ಉಂಟಾಗುವ ಅಪಾಯವಿದೆ ಎಂದು ಬ್ರಿಟಿಷ್ ಮೂಲದ ಕಂಪನಿ ರೆಕಿಟ್ ಬೆನ್ಕಿಸರ್ ಮಾಹಿತಿ ನೀಡಿದೆ.
ಕ್ರಿಮಿನಾಶಕ ಚುಚ್ಚುಮದ್ದುಗಳನ್ನು ಬಳಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆ ಇದ್ದು, ಇಂತಹ ಅಪಾಯಕಾರಿ ಕ್ರಮಕ್ಕೆ ಒಳಗಾಗದಂತೆ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಅಲ್ಲದೆ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಅದರ ಗಂಭೀರತೆಯನ್ನರಿತು, ಯಾವುದೇ ಕಾರಣಕ್ಕೂ ಕ್ರಿಮಿ ನಾಶಕ ಕೆಮಿಕಲ್ ಉತ್ಪನ್ನಗಳನ್ನು ಕೊರೋನಾ ವೈರಸ್ ಗೆ ಚಿಕಿತ್ಸೆಯಾಗಿ ಬಳಸದಂತೆಯೂ ಅದು ಸ್ಪಷ್ಟವಾಗಿ ತಿಳಿಸಿದೆ.
ಗುರುವಾರವಷ್ಟೇ ಟ್ರಂಪ್ ಶ್ವೇತಭವದಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊರೋನಾ ನಿವಾರಣೆಗೆ ಕ್ರಿಮಿನಾಶಕ ಚುಚ್ಚುಮದ್ದು ಮತ್ತು ನೇರಳಾತೀತ ವಿಕಿರಣ ಬಳಕೆ ಮಾಡುವಂತೆ ತಿಳಿಸಿದ್ದರು. ಅಲ್ಲದೆ ಈ ಕ್ರಮವನ್ನು ಬಳಸುವ ಮೂಲಕ ಸೋಂಕನ್ನು ಬೇರು ಸಮೇತ ನಾಶಗೊಳಿಸಲು ಸಾಧ್ಯವಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಅಲ್ಲದೆ ಈ ವಿಚಾರದಲ್ಲಿ ತಮಗೆ ಆಸಕ್ತಿ ಇರುವುದಾಗಿಯೂ ಟ್ರಂಪ್ ಹೇಳಿದ್ದರು.
ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಇದರ ದುಷ್ಪರಿಣಾಮದ ಅರಿವು ಮೂಡಿಸುವ ಸಲುವಾಗಿ ರೆಕಿಟ್ ಬೆನ್ಕಿಸರ್ ಈ ಮಾಹಿತಿ ಬಿಡುಗಡೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.