ನವದೆಹಲಿ: ಭಾರತಕ್ಕೆ 5.5 ಲಕ್ಷ ಟೆಸ್ಟಿಂಗ್ ಕಿಟ್ಗಳನ್ನು ಪೂರೈಕೆ ಮಾಡಿರುವ ಚೀನಾದ ಔಷಧ ಕಂಪನಿಯು, ಭಾರತೀಯ ಏಜೆನ್ಸಿಗಳೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದೆ.
ಆ ಕಂಪನಿ ಕಳುಹಿಸಿಕೊಟ್ಟಿರುವ ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿದೆ ಎಂಬ ಆರೋಪವನ್ನು ಭಾರತ ಮಾಡಿದೆ ಹಿನ್ನೆಲೆಯಲ್ಲಿ ಕಂಪನಿಯು ಈ ಹೇಳಿಕೆಯನ್ನು ನೀಡಿದೆ.
ಪ್ರತ್ಯೇಕ ಹೇಳಿಕೆ ನೀಡಿರುವ, ಗೌನ್ಸ್ಹೌ ವೊಂಡ್ಫೋ ಬಯೋಟೆಕ್ ಮತ್ತು ಲಿವ್ಝೊನ್ ಡಯೋಗ್ನೊಸ್ಟಿಕ್ ಕಂಪನಿಗಳು, ತಾವು ಉತ್ಪನ್ನಗಳ ಗುಣಮಟ್ಟವನ್ನು ಕಠಿಣವಾಗಿ ನಿಯಂತ್ರಿಸುವುದು ಮತ್ತು ನಿರ್ದಿಷ್ಟ ಮಾನದಂಡಗಳನ್ನು ಪಾಲನೆ ಮಾಡುವುದಾಗಿ ಹೇಳಿಕೊಂಡಿದೆ.
ಭಾರತದ ಸರ್ವೋಚ್ಛ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಮಂಗಳವಾರ ರಾಜ್ಯಗಳಿಗೆ ನೀಡಿದ ನಿರ್ದೇಶನದಲ್ಲಿ, ರಾಪಿಡ್ ಆಂಟಿಬಾಡಿ ಟೆಸ್ಟ್ ಕಿಟ್ಗಳನ್ನು ಬಳಸದಂತೆ ನಿರ್ದೇಶನ ನೀಡಿತ್ತು. ಭಾರತ ಒಟ್ಟು ಐದೂವರೆ ಲಕ್ಷ ಕಿಟ್ಗಳನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಗೌನ್ಸ್ಹೌ 3 ಲಕ್ಷ ಕಿಟ್ಗಳನ್ನು ನೀಡಿದ್ದರೆ. ಉಳಿದವನ್ನು ಲಿವ್ಝೊನ್ ಕಂಪನಿ ನೀಡಿದೆ.
ಭಾರತದಲ್ಲಿ ಇವುಗಳ ಗುಣಮಟ್ಟ ಕಳಪೆಯಾಗಿದೆ ಎಂದು ಪತ್ತೆಯಾಗಿದೆ.
ಹೇಳಿಕೆಯಲ್ಲಿ ಗೌನ್ಸ್ಹೌ ಕಂಪನಿಯು, “70ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ, ಉತ್ಪನ್ನವನ್ನು ಮೌಲ್ಯೀಕರಿಸಲಾಗಿದೆ. ಐಸಿಎಂಆರ್ ಕೂಡ ನ್ಯಾಷನಲ್ ಇನ್ಸ್ಟಿಟ್ಯೂಟ್ ವೈರಾಲಜಿ ಪುಣೆ ಮೂಲಕ ಇದನ್ನು ಅನುಮೋದಿಸಿದೆ” ಎಂದಿದೆ.
ಇನ್ನೊಂದು ಕಂಪನಿ ಕೂಡ ತನ್ನ ಉತ್ಪನ್ನಗಳು ಮೌಲ್ಯೀಕರಿಸಿದ್ದು ಎಂದು ಹೇಳಿಕೊಂಡಿದೆ.
ಕಿಟ್ಗಳಿಗೆ ಸಂಬಂಧಿಸಿದಂತೆ ಭಾರತೀಯ ಏಜೆನ್ಸಿಗಳಿಗೆ ಎಲ್ಲ ರೀತಿಯಲ್ಲೂ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದು ಕಂಪನಿ ಹೇಳಿದೆ.
ಉಭಯ ಕಂಪನಿಗಳು ಅಧಿಕೃತ ಹೇಳಿಕೆಯನ್ನು ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಮೂಲಕ ಹೊರಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.