ನವದೆಹಲಿ: ದೇಶದ ನಿದ್ದೆಗೆಡಿಸಿರುವ ಕೊರೋನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಆನ್ಲೈನ್ ಮೂಲಕ ತರಬೇತಿ ಕೋರ್ಸ್ಗೂ ಮುಂದಾಗಿರುವ ಕೇಂದ್ರ ಅದಕ್ಕಾಗಿ igot.govt.in. ಎಂಬ ಕಾರ್ಯಾಗಾರವನ್ನು ನಡೆಸುತ್ತಿದ್ದು, ಇದರಲ್ಲಿ ಈಗಾಗಲೇ 1.83 ಲಕ್ಷಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾಗಿಗಳಾಗಲು ಮುಂದಾಗಿದ್ದಾರೆ.
ಡಿಒಪಿಟಿ ಯಡಿಯಲ್ಲಿ ಈ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದ್ದು, ಇದರಲ್ಲಿ ಕ್ಲಿನಿಕಲ್ ಮ್ಯಾನೇಜ್ಮೆಂಟ್, ಐಸಿಯು ಕೇರ್ ಮ್ಯಾನೇಜ್ಮೆಂಟ್, ಸೋಂಕು ತಡೆಗಟ್ಟುವಿಕೆ, ಆರೈಕೆ, ಪಿಪಿಇ, ಸಂಪರ್ಕ ತಡೆ, ಪ್ರತ್ಯೇಕತೆ, ಎನ್ ಸಿ ಸಿ ಕೆಡೆಟ್ ಗಳಿಗೆ ತರಬೇತಿ, ಕೋವಿಡ್ ನಿರ್ವಹಣೆ, ಪ್ರಯೋಗಾಲಯ, ಮಾದರಿ ಸಂಗ್ರಹ, ಪರೀಕ್ಷೆ ಮೊದಲಾದ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ರೋಗಿಗಳ ಮಾನಸಿಕ ಆರೋಗ್ಯ, ಗರ್ಭಧಾರಣೆ ಮೊದಲಾದವುಗಳ ಬಗೆಗೂ ತರಬೇತಿ ನಡೆಸಲಾಗುತ್ತಿದೆ. ಅಲ್ಲದೆ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯರು, ಪೊಲೀಸರು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಪೂರಕವಾಗುವ ವಿಷಯಗಳ ಬಗ್ಗೆಯೂ ಈ ಆನ್ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಆನ್ಲೈನ್ ತರಬೇತಿ ಆರಂಭವಾದ ಎರಡೇ ವಾರಗಳಲ್ಲಿ ಅತೀ ಹೆಚ್ಚು ಜನರಿಂದ ಪ್ರತಿಕ್ರಿಯೆ ಪಡೆದಿದ್ದು, ಇದೊಂದು ಯಶಸ್ವಿ ಪ್ರಯೋಗ ಎಂಬುದು ಸಾಬೀತಾಗಿದೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಕೋವಿಡ್ ಹೋರಾಟದ ಇನ್ನೂ ಅನೇಕ ಅಂಶಗಳನ್ನು ಸೇರಿಸಲಾಗುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ವಿಶೇಷ ಪ್ಲ್ಯಾಟ್ಫಾರ್ಮ್ ಗಳಾದ ಫ್ಲೆಕ್ಸಿ ಟೈಮ್ ಮತ್ತು ಆನ್ ಸೈಟ್ ಆಧಾರದ ಮೇಲೆ ತರಬೇತಿ ಮಾಡೆಲ್ ಗಳನ್ನು ಸಿದ್ಧ ಮಾಡಲಾಗಿದೆ. ಇದನ್ನು ಸ್ಮಾರ್ಟ್ ಫೋನ್ಗಳ ಮೂಲಕವೂ ಕಲಿಯಬಹುದಾಗಿದೆ. ಇದಕ್ಕಾಗಿ ಈಗಾಗಲೇ ಆಂಡ್ರಾಯ್ಡ್ ಆಧಾರಿತ ಆಪ್ ಒಂದನ್ನು ಅಭಿವೃದ್ಧಿ ಮಾಡಲಾಗಿದೆ ಎಂದೂ ಸಿಂಗ್ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.