News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾವೈರಸ್ ನಮ್ಮೊಂದಿಗೆ ದೀರ್ಘ ಸಮಯ ಇರಲಿದೆ : WHO ಮುಖ್ಯಸ್ಥ

ನವದೆಹಲಿ: ಕೊರೋನಾವೈರಸ್ ಮಹಾ ಸಾಂಕ್ರಾಮಿಕ ರೋಗವು ನಮ್ಮೊಂದಿಗೆ ಸುಧೀರ್ಘ ಸಮಯಗಳವರೆಗೆ ಇರಲಿದೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನೊಮ್ ಗೆಬ್ರೇಯೆಸಸ್ ಹೇಳಿದ್ದಾರೆ.

ಅಲ್ಲದೆ, ಇನ್ನೂ ಅನೇಕ ರಾಷ್ಟ್ರಗಳು ವೈರಸ್ಸನ್ನು ಎದುರಿಸುವ ಪ್ರಾರಂಭಿಕ ಹಂತದಲ್ಲೇ ಇದೆ ಎಂಬ ಎಚ್ಚರಿಕೆಯನ್ನು ಅವರು ರವಾನಿಸಿದ್ದಾರೆ.

“ಅನೇಕ ರಾಷ್ಟ್ರಗಳು ತಾವು ಯಶಸ್ವಿಯಾಗಿ ಮಾರಣಾಂತಿಕ ವೈರಸ್ಸನ್ನು ನಿಯಂತ್ರಣಕ್ಕೆ ತಂದಿದ್ದೇವೆ ಎಂಬ ಭಾವನೆಯಲ್ಲಿ ಇವೆ, ಆದರೆ ಸನ್ನಿವೇಶ ಹಾಗಿಲ್ಲ. ಇನ್ನು ಹಲವು ಆಫ್ರಿಕಾ ರಾಷ್ಟ್ರಗಳಲ್ಲಿ ಮತ್ತು ಅಮೆರಿಕದಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಪ್ರಕಾರ, “ವೈರಸ್ ಎದುರಿಸಲು ಸಜ್ಜಾಗುವಂತೆ ಮತ್ತು ಯೋಜನೆಗಳನ್ನು ರೂಪಿಸುವಂತೆ ರಾಷ್ಟ್ರಗಳಿಗೆ ಕಾಲಾವಕಾಶವನ್ನು ನೀಡುವ ಸಲುವಾಗಿ ಜನವರಿ 30ರಂದು ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಲಾಯಿತು” ಎಂದು ಹೇಳಿದ್ದಾರೆ.

“ಪಾಶ್ಚಿಮಾತ್ಯ ಯುರೋಪ್‌ನಲ್ಲಿ ಸಾಂಕ್ರಾಮಿಕ ತೆಯೂ ಸ್ಥಿರವಾಗಿದೆ ಅಥವಾ ಕಡಿಮೆಯಾಗುತ್ತಿದೆ. ಸಂಖ್ಯೆಗಳು ಇಳಿಕೆಯಾಗುತ್ತಿದೆ, ಆದರೆ ಆಫ್ರಿಕಾ, ಸೆಂಟ್ರಲ್ ಮತ್ತು ಸೌತ್ ಅಮೆರಿಕ, ಪೂರ್ವ ಯುರೋಪ್‌ಗಳಲ್ಲಿ ಸನ್ನಿವೇಶ ಚಿಂತಾಜನಕವಾಗುತ್ತಿದೆ. ಹಲವು ರಾಷ್ಟ್ರಗಳು ಇನ್ನೂ ಸಾಂಕ್ರಾಮಿಕತೆಯ ಪ್ರಾಥಮಿಕ ಹಂತದಲ್ಲಿದೆ. ಬಹುಬೇಗನೆ ಸಾಂಕ್ರಾಮಿಕತೆಯನ್ನು ಪಡೆದುಕೊಂಡ ಕೆಲವು ರಾಷ್ಟ್ರಗಳಲ್ಲಿ ಇನ್ನೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ” ಎಂದಿದ್ದಾರೆ.

“ನಾವು ಇನ್ನೂ ದೀರ್ಘ ಹಾದಿಯನ್ನು ಸವೆಸಬೇಕಾಗಿದೆ, ವೈರಸ್ ನಮ್ಮೊಂದಿಗೆ ಸುಧೀರ್ಘ ಕಾಲ ಇರಲಿದೆ. ಹಿಂತಿರುಗಿ ನೋಡಿದಾಗ ಜನವರಿ 30 ರಂದು ಜಾಗತಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿ ನಾವು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅನಿಸುತ್ತಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top