ಮಂಗಳೂರು: ಕೊರೋನಾ ಲಾಕ್ಡೌನ್ ಎಫೆಕ್ಟ್ ಮಂಗಳೂರಿಗೂ ತಟ್ಟಿದೆ. ಅದೆಷ್ಟೋ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು ಮಂಗಳೂರು ಪರಿಸರದಲ್ಲಿಯೂ ಇದ್ದು, ಅಂತಹವರಿಗೆ ಸಹಾಯಕ್ಕೆಂದು ಮೂಡಬಿದ್ರೆಯ ಕೃಷ್ಣಕಟ್ಟೆಯ ಬಳಿ ಸೌಹಾರ್ದ ಫೋರಂ ನವರು ಹಸಿದವರಿಗೆ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ನಗರದಲ್ಲಿ ಆಹಾರ, ನೀರು, ಬಿಸ್ಕೆಟ್ ಮೊದಲಾದ ವಸ್ತುಗಳನ್ನು ತುಂಬಿದ ಸ್ಟ್ಯಾಂಡ್ ಒಂದನ್ನು ಫೋರಂ ಇರಿಸಿದ್ದು, ಹಸಿದವರ ಹೊಟ್ಟೆ ತುಂಬಿಸುವ ಮಹತ್ಕಾರ್ಯಕ್ಕೆ ತೊಡಗಿದೆ.
ಲಾಕ್ಡೌನ್ನಿಂದಾಗಿ ಅಂಗಡಿಗಳು, ಹೊಟೇಲ್ಗಳು ಮುಚ್ಚಲ್ಪಟ್ಟಿದ್ದು ಅಗತ್ಯವುಳ್ಳವರಿಗೆ ಆಹಾರ ದೊರಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮೂಡಬಿದ್ರೆ ಯಲ್ಲಿ ಇಂತಹ ಒಂದು ಸಹಾಯ ಕೇಂದ್ರ ಆರಂಭಿಸುವ ಮೂಲಕ ಹಸಿದವರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ.
ಇನ್ನು ಸೋಂಕು ತಡೆಗಟ್ಟಲು ಸರ್ಕಾರ ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆಯೂ ಈ ಹಿಂದೆಯೇ ತಿಳಿಸಿದೆ. ಆದ್ದರಿಂದ ಈ ಆಹಾರದ ಸ್ಟ್ಯಾಂಡ್ ಬಳಿ ಸ್ಯಾನಿಟೈಸರ್ ಗಳನ್ನು ಇಡಲಾಗಿದ್ದು, ಆಹಾರ ವಸ್ತುಗಳನ್ನು ತೆಗೆದುಕೊಳ್ಳುವವರಿಗೆ ಕೈ ತೊಳೆದುಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಒಟ್ಟಿನಲ್ಲಿ ಹಸಿವಿನ ಹೊಟ್ಟೆಗೆ ಆಹಾರ ನೀಡುವ ಮೂಲಕ ಸೌಹಾರ್ದ ಫೋರಂ ಇತರರಿಗೂ ಮಾದರಿಯಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.