ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಖ್ಯಾತ ಫಾಸ್ಟ್ ಫುಡ್ ಚೈನ್ ಕೆಎಫ್ಸಿಯ ರುಚಿ ರುಚಿಯಾದ ಊಟವನ್ನು ಸವಿಯುವ ಅವಕಾಶವನ್ನು ಪಡೆಯಲಿದ್ದಾರೆ.
ಐಆರ್ಸಿಟಿಸಿಯು (Indian Railway Catering and Tourism Corporation) ಕೆಎಫ್ಸಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಇವೆರಡೂ ಸೇರಿ ಪ್ರಯಾಣಿಕರಿಗೆ ಡೆಲಿವರಿ ಸಿಸ್ಟಮ್ ಆರಂಭಿಸಲಿದೆ.
ಹೀಗಾಗಿ ರೈಲು ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗಲೇ ಐಆರ್ಸಿಟಿಸಿ ಮೂಲಕ ಕೆಎಫ್ಸಿ ಆಹಾರಕ್ಕೆ ಆರ್ಡರ್ ಮಾಡಬಹುದಾಗಿದೆ, ಇ-ಕ್ಯಾಟರಿಂಗ್ ಯೋಜನೆಯ ಅನ್ವಯ ಈ ಸೇವೆಯನ್ನು ಆರಂಭಿಸಲಾಗಿದೆ.
ಪ್ರಸ್ತುತ ಈ ಸೇವೆಯನ್ನು ಜುಲೈ 20ರಿಂದ ನವದೆಹಲಿಯ 12 ರೈಲುಗಳಲ್ಲಿ ಅಳವಡಿಸಲಾಗಿದೆ. ಮುಂದೆ ವಿಶಾಖಪಟ್ಟಣಂ, ಹೈದರಾಬಾದ್, ಬೆಂಗಳೂರಿಗೂ ಇದು ವಿಸ್ತರಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.