ಬೆಂಗಳೂರು: ದೇಶದೆಲ್ಲೆಡೆ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಕರ್ನಾಟಕ ದಲ್ಲಿಯೂ ಲಾಕ್ಡೌನ್ ಎಫೆಕ್ಟ್ ಪರಿಣಾಮಕಾರಿಯಾಗಿಯೇ ಕೆಲಸ ಮಾಡುತ್ತಿದ್ದರೂ ಸೋಂಕು ಮಾತ್ರ ಹೆಚ್ಚುತ್ತಲೇ ಇದೆ. ಇದನ್ನು ಮನಗಂಡಿರುವ ಡಿಜಿಪಿ ಪ್ರವೀಣ್ ಸೂದ್ ಅವರು ಲಾಕ್ಡೌನ್ ಸಂದರ್ಭ ಒಂದು ಮುಖ್ಯವಾದ ಆದೇಶವನ್ನು ಜಾರಿಗೆ ತರುವ ಮೂಲಕ ಮತ್ತಷ್ಟು ಕಟ್ಟುನಿಟ್ಟಾಗಿ ಸೋಂಕು ನಿಯಂತ್ರಣ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಜಿಪಿ ಅವರು, ಮುಂದಿನ ದಿನಗಳಲ್ಲಿ ಕೇವಲ ಎರಡು ಸಂದರ್ಭಗಳಲ್ಲಷ್ಟೇ ಮನೆಯಿಂದ ಸಾರ್ವಜನಿಕರಿಗೆ ಹೊರಬರಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಜನನ ಮತ್ತು ಮರಣದ ಸಂದರ್ಭಗಳಲ್ಲಿ ಆಯಾ ಪ್ರದೇಶಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ಒಪ್ಪಿಗೆ ಪತ್ರದ ಜೊತೆಗೆ ಮನೆಯಿಂದ ಹೊರಗೆ ತೆರಳಬಹುದು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ. ಅನಾವಶ್ಯಕವಾಗಿ ಮನೆಯಿಂದ ಹೊರಬಂದು ತಿರುಗಾಟ ನಡೆಸಿದಲ್ಲಿ ವಾಹನಗಳನ್ನು ಸೀಝ್ ಮಾಡುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
We’ll TRY to facilitate and unite families within the city/state /states, as one time med emergency in the below cases ONLY:Child birth and Sad demise of a family member
Please arrange your own transport & medical transcriptions for verification. Call 22942300/ 2400/2500— DGP KARNATAKA (@DgpKarnataka) April 13, 2020
ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೊರೋನಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಜಾರಿಗೆ ತಂದಿವೆ. ಪೊಲೀಸರು ಈ ಕ್ರಮಗಳು ಸರಿಯಾಗಿ ಪಾಲನೆಯಾಗುವ ನಿಟ್ಟಿನಲ್ಲಿಯೂ ಮನೆ, ಮಠ, ಮಕ್ಕಳು ಜೊತೆಗೆ ತಮ್ಮ ಆರೋಗ್ಯವನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಆದರೂ ಕೆಲವು ಜನರು ಮಾತ್ರ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಅಂತಹ ಮನಸ್ಥಿತಿಯ ಜನರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಡಿಜಿಪಿ ಅವರು ಈಗ ಈ ಕ್ರಮಕ್ಕೆ ಮುಂದಾಗಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.