ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಲಿಯನ್ ವಾಲಾಭಾಗ್ ನರಮೇಧದಲ್ಲಿ ಪ್ರಾಣತೆತ್ತ ಹುತಾತ್ಮರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ” ಜಲಿಯನ್ ವಾಲಾ ಬಾಗ್ ನರಮೇಧದಲ್ಲಿ ಹುತಾತ್ಮರಾದವರ ಶೌರ್ಯ ನಿರಂತರವಾಗಿ ಭಾರತೀಯರಿಗೆ ಸ್ಪೂರ್ತಿ ನೀಡಲಿದೆ” ಎಂದಿದ್ದಾರೆ.
“ಈ ದಿನ ಜಲಿಯನ್ ವಾಲಾಬಾಗ್ ದುರಂತದಲ್ಲಿ ಅಮಾನವೀಯವಾಗಿ ಕೊಲ್ಲಲ್ಪಟ್ಟ ಹುತಾತ್ಮರಿಗೆ ನಾನು ತಲೆಬಾಗುತ್ತೇನೆ. ಅವರ ಧೈರ್ಯ ಮತ್ತು ತ್ಯಾಗವನ್ನು ನಾವೆಂದು ಮರೆಯಲಾರೆವು. ಮುಂಬರುವ ವರ್ಷಗಳಲ್ಲಿ ಭಾರತೀಯರಿಗೆ ಅವರ ಶೌರ್ಯ ಸ್ಫೂರ್ತಿ ನೀಡಲಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ಭೇಟಿ ನೀಡಿದ್ದ ತಮ್ಮ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
I bow to those martyrs who were killed mercilessly in Jallianwala Bagh on this day. We will never forget their courage and sacrifice. Their valour will inspire Indians for the years to come. pic.twitter.com/JgDwAoWkAy
— Narendra Modi (@narendramodi) April 13, 2020
1919ರ ಎಪ್ರಿಲ್ 13ರಂದು ಜಲಿಯನ್ ವಾಲಾಬಾಗ್ ನರಮೇಧ ನಡೆದಿತ್ತು. ಬ್ರಿಟಿಷ್ ಕಮಾಂಡರ್ ಡಯರ್ ನೇತೃತ್ವದಲ್ಲಿ ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡಿನ ಸುರಿಮಳೆಗೈಯಲಾಗಿತ್ತು.
ಬ್ರಿಟಿಷರ ಪ್ರಕಾರ ಈ ಘಟನೆಯಲ್ಲಿ 379 ಮಂದಿ ಮೃತರಾಗಿದ್ದರು. ಆದರೆ ವಾಸ್ತವವಾಗಿ ಇದರಲ್ಲಿ 1,000 ಮಂದಿ ಭಾರತೀಯರು ಮೃತರಾಗಿದ್ದರು.1, 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.