ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಲ್ಲು ಕೋರೆಗಳು ಸಾಕಷ್ಟಿವೆ. ಕಾರ್ಕಳ ತಾಲೂಕು ಒಂದರಲ್ಲೆ 189 ಕ್ಕೂ ಅಧಿಕ ಕಲ್ಲು ಕೋರೆಗಳಿವೆ. ಕುಂದಾಪರ ತಾಲೂಕಿನ ಹಾಲಾಡಿ, ಹರ್ಕಲಾಡಿಯ ಸಾಮಾಜಿಕ ಅರಣ್ಯ ಮೀಸಲು ಪ್ರದೇಶದಲ್ಲಿ ನಡೆಸುತ್ತಿರುವ ದೊಡ್ಡ ಪ್ರಮಾಣದ ಕಲ್ಲು ಕೋರೆಯಿಂದ 30 ಮನೆಗಳ ಸ್ಥಳೀಯ ನಿವಾಸಿಗಳು ನಲುಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 250 ಕ್ಕೂ ಅಧಿಕ ಕಲ್ಲು ಕೋರೆಗಳಿವೆ. ಇದರಲ್ಲಿ ಯಾವದೇ ಅನುಮತಿ ಇಲ್ಲದೇ ನಡೆಸುತ್ತಿರುವ ಕಲ್ಲು ಕೋರೆಗಳ ಪ್ರಮಾಣವೇ ಹೆಚ್ಚು, ಇದೇ ತರಹ ಕುಂದಾಪುರ ತಾಲೂಕಿನ ಹಾಲಾಡಿ, ಹರ್ಕಲಾಡಿಯ ಸಾಮಾಜಿಕ ಮೀಸಲು ಅರಣ್ಯ ಪ್ರದೇಶದಲ್ಲಿನಡೆಸುತ್ತಿರುವ ದೋಡ್ಡ ಪ್ರಮಾಣದ ಕಲ್ಲು ಕೋರೆಯಿಂದ ಸ್ಥಳೀಯ ನಿವಾಸಿಗಳು ನಲುಗಿದ್ದಾರೆ. ಇಲ್ಲಿ ಯಾವದೇ ಮುಂಜಾಗ್ರತೆ ಕ್ರಮ ಜರುಗಿಸದೇ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಬಳಸಿ ಗಣಿಕಾರಿಕೆ ನಡೆಸುತ್ತಿದ್ದಾರೆ.
ಮೂರುವರೆ ಎಕರೆ ಪ್ರದೇಶದಲ್ಲಿರುವ ನಡೆಸುತ್ತಿರುವ ಕಲ್ಲುಗಣಿಗಾರಿಕೆ ಸಮುದ್ರದ ದಡಕ್ಕೆ ಹಾಕಲು ಕಲ್ಲುಗಳನ್ನು ಅಗೆಯಲಾಗುತ್ತಿದೆ. ಇನ್ನು ಈ ಕಲ್ಲು ಕೋರೆಗಳ ಕುರಿತು ಸಂಭಂಧ ಪಟ್ಟ ಅಧಿಕಾರಿಗೆ ಪೋನ್ ಮೂಲಕವಾಗಲಿ ನೇರವಾಗಿ ಭೇಟಿಯಾಗಿ ಆಗಲಿ ತಿಳಿಸಿದರೆ ಅಧಿಕಾರಿಗಳೇ ಕಲ್ಲುಗಣಿಯ ಮಾಲೀಕರಿಗೆ ಪೋನ್ ಮೂಲಕ ನಿಮ್ಮ ಮೇಲೆ ಕ್ರಮಕೈಗೋಳ್ಳಿ ಎಂದು ಇಂತವರು ದೂರು ಕೋಟ್ಟಿದ್ದಾರೆ ಎಂದು ಹೇಳುತ್ತಾರೆ, ಎ೦ದು ಸ್ಥಳೀಯರು ಹೇಳುತ್ತಿದ್ದಾರೆ.
ಇನ್ನು ಈ ಹಾಳಾಡಿಯ ಕಲ್ಲು ಗಣಿಯಿಂದ ಹತ್ತಿರದ ಮನೆಗಳೆಲ್ಲಾ ಬಿರುಕು ಬಿಡುತ್ತಿವೆ. ನಿರಂತರವಾಗಿ ಸ್ಪೋಟಿಸುತ್ತಿರುವದರಿಂದ ಸಿಡಿದ ಕಲ್ಲಿನ ಚೂರುಗಳು ಮೈ ಮೇಲೆ ಬೀಳುವದಲ್ಲದೇ ಮನೆಯ ಮೇಲೆ ಬಿದ್ದು ಛಾವಣಿಯ ಹಂಚುಗಳೆಲ್ಲವೂ ಒಡೆದು ಹೋಗುತ್ತಿವೆ. ಇನ್ನು ಇಲ್ಲಿ ನಡೆಯುವ ಆಕ್ರಮದ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ, ಯಾವ ನಿಯಮವನ್ನು ಪಾಲಿಸದೇ ಕಲ್ಲುಕೋರೆ ನಡೆಸುತ್ತಿರುವವರ ವಿರುದ್ದ ದೂರು ಕೋಟ್ಟರೂ ಯಾವದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಸುಶಿಲಾ.
ಇನ್ನು ಕೆಲ ಕಲ್ಲು ಕೋರೆಗಳು ರಸ್ತೆಯ ಪಕ್ಕದಲ್ಲೆ ಇರುವದರಿಂದ, ಮಳೆಗಾಲದ ಈ ಸಮಯದಲ್ಲಿ ನೀರು ತುಂಬಿರುವದರಿಂದ ಮಕ್ಕಳು ಕೂಡಾ ಅದರಲ್ಲಿ ಬೀಳಬಹುದು ಎಂಬುದು ಸ್ತಳಿಯರಲ್ಲಿ ಆತಂಕ ಉಂಟಾಗಿದೆ. ಇನ್ನಾದರೂ ಸಂಭಂಧ ಪಟ್ಟ ಇಲಾಖೆ ಈ ಕುರಿತು ಕ್ರಮ ಕೈಗೋಳ್ಳತ್ತಾ ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.