ಇತ್ತೀಚಿಗಷ್ಟೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಕೇಂದ್ರಿತ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ ಎಂಬುದು ಅವರ ಮಾತಿನ ಅರ್ಥವಾಗಿದೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸನ್ನು ಮೀರಿ ನಾನು ಅತಿ ಶೀಘ್ರದಲ್ಲೇ ಚೀನಿಯರಿಗೆ ನಮ್ಮ ಗಡಿಗಳನ್ನು ಸಂಪೂರ್ಣ ಮುಚ್ಚಿ ಬಿಟ್ಟೆ. ಯಾಕೆ ಎಷ್ಟು ತಪ್ಪು ಶಿಫಾರಸ್ಸುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮಾಡುತ್ತಿದೆ? ಎಂದು ಟ್ರಂಪ್ ಪ್ರಶ್ನಿಸಿದ್ದರು.
ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಟೀಕಿಸಿದವರು ಟ್ರಂಪ್ ಒಬ್ಬರೇ ಅಲ್ಲ. ಭಾರತವೂ ಕೂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ನೇರವಾಗಿ ಟೀಕೆ ಮಾಡದೇ ಇದ್ದರೂ, ಅದರ ಕೆಲವೊಂದು ನಿರ್ದೇಶನಗಳನ್ನು ನಿರ್ಲಕ್ಷ್ಯ ಮಾಡಿದೆ.
ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ತುಸು ದೂರದಲ್ಲೇ ಇಟ್ಟ ಭಾರತ, ತೈವಾನ್, ಸಿಂಗಾಪುರ, ದಕ್ಷಿಣ ಕೊರಿಯಾಗಳು ಹೋರಾಟದಲ್ಲಿ ತುಸು ಹೆಚ್ಚು ಯಶಸ್ಸನ್ನು ಪಡೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ. ಒಂದು ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು, ಸಮರ್ಪಕವಾದ ಶಿಫಾರಸ್ಸುಗಳನ್ನು ದೇಶಗಳಿಗೆ ನೀಡಿದರೆ ಇಷ್ಟೊಂದು ಜೀವ ಹಾನಿ ಆಗುತ್ತಿರಲಿಲ್ಲವೇನೋ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುವಲ್ಲಿ ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಬದಲು ತನ್ನದೇ ಆದ ದೇಶಿಯ ತಜ್ಞ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನ್ನು ಹೆಚ್ಚು ನಂಬಿದೆ. ಈ ಹಿಂದೆ ಎಲ್ಲಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇ ಅಂತಿಮವಾಗಿತ್ತು. ಭಾರತದ ಟಿಬಿ ಅಥವಾ ರೋಗನಿರೋಧಕ ಲಸಿಕೆ ಕಾರ್ಯಕ್ರಮಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿಷಯದಲ್ಲಿ ಹಾಗಾಗಲಿಲ್ಲ.
ಮೋದಿ ಸರಕಾರವು ದೇಶೀಯ ತಜ್ಞರನ್ನು ನೆಚ್ಚಿಕೊಂಡಿದ್ದು ಮತ್ತು ಇದರಿಂದ ತಕ್ಕಮಟ್ಟಿನ ಯಶಸ್ಸನ್ನು ಪಡೆಯಿತು. ವಿಶ್ವ ಆರೋಗ್ಯ ಸಂಸ್ಥೆಯು ಕೊರೋನವೈರಸ್ ಬಗ್ಗೆ ನೀಡಿದ ಸಲಹೆ ಸೂಚನೆಗಳನ್ನು ಚಾಚುತಪ್ಪದೆ ಭಾರತ ಪಾಲಿಸುತ್ತಿದ್ದರೆ ಬಹುಶಃ ಪರಿಸ್ಥಿತಿ ಬೇರೆಯದೇ ಆಗಿರುತ್ತಿತ್ತು. ದೇಶಿಯ ತಜ್ಞರು, ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟು ಮೋದಿ ಸರ್ಕಾರ ಉತ್ತಮ ಕಾರ್ಯವನ್ನು ಮಾಡಿದೆ.
ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯೆಸಸ್ ಅವರು ಚೀನಾದ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಬೇಡಿ ಎಂದು ಕಟುವಾಗಿ ಹೇಳಿದ್ದರು, ಮತ್ತು ಆ ರೀತಿ ಮಾಡಿದ ದೇಶಗಳನ್ನು ಟೀಕೆಗೆ ಒಳಪಡಿಸಿದ್ದರು.
ಆದರೆ ಜನವರಿ 25 ರಂದು ಭಾರತ-ಚೀನಾಗೆ ಎಲ್ಲಾ ಅನಗತ್ಯ ಪ್ರಯಾಣಗಳನ್ನು ನಿರ್ಬಂಧಿಸಿತು. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರ ನಿರ್ದೇಶನವನ್ನೂ ಮೀರಿ ದೇಶವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಮಾಡಬೇಕಾದ ಎಲ್ಲಾ ಕಾರ್ಯವನ್ನು ಮೋದಿ ಸರ್ಕಾರ ಮಾಡಿತು. ಭಾರತ ಚೀನಾಗೆ ಏರ್ ಇಂಡಿಯಾ ವಿಮಾನಗಳನ್ನೂ ಹಾರಿಸಲಿಲ್ಲ.
ಭಾರತ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬಳಸುತ್ತಿರುವ ಕ್ರಮಗಳು ವಿಶ್ವಸಂಸ್ಥೆ ಹೇಳಿದ ಕ್ರಮಗಳಿಗಿಂತ ಭಿನ್ನವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ, ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿತ್ತು, ಆದರೆ ಭಾರತದ ಬದಲು ಪ್ರತ್ಯೇಕ ವಾಸಕ್ಕೆ ಹೆಚ್ಚು ಮಹತ್ವ ನೀಡಿದೆ.
ಅದಕ್ಕಿಂತಲೂ ಮಿಗಿಲಾಗಿ ಸಾಮಾಜಿಕ ಅಂತರ ಮತ್ತು ಪ್ರತ್ಯೇಕ ವಾಸವನ್ನು ಖಚಿತಪಡಿಸಿಕೊಳ್ಳಲು 21 ದಿನಗಳ ಲಾಕ್ ಡೌನ್ ಅನ್ನು ಘೋಷಣೆ ಮಾಡಿತು.
ಒಮ್ಮೆ ಪರೀಕ್ಷೆಗೊಳಪಟ್ಟ ವ್ಯಕ್ತಿಯು ನಂತರದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂಬುದನ್ನು ಭಾರತ ಮನಗಂಡಿದೆ. ಅದರ ಬದಲು ಶಂಕಿತರನ್ನು ಪತ್ತೆಮಾಡಿ ಕ್ವಾರಂಟೈನ್ ಮಾಡುವುದು ಹೆಚ್ಚು ಸಮರ್ಪಕವಾದ ವಿಧಾನ ಎಂಬುದನ್ನು ಕಂಡುಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಾಡಿದ ದೊಡ್ಡ ಯಡವಟ್ಟು ಎಂದರೆ ಮಾಸ್ಕ್ ಧರಿಸುವುದರ ವಿರುದ್ಧ ಮಾತನಾಡಿದ್ದು. ಭಾರತ ವಿಷಯದಲ್ಲೂ ತನಗನಿಸಿದ್ದನ್ನು ಮಾಡಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೂ ಭಾರತದಲ್ಲಿ ಮಾಸ್ಕ್ ಧರಿಸುತ್ತಿದ್ದಾರೆ. ಸೋಂಕು ಹರಡುವುದಕ್ಕೆ ಮುನ್ನವೇ ಭಾರತದಲ್ಲಿ ಹಲವರು ಮಾಸ್ಕ್ ಧರಿಸುತ್ತಿದ್ದರು. ಪ್ರಾಥಮಿಕ ಹಂತದಲ್ಲೇ ಮಾಸ್ಕ್ ಧರಿಸುವ ಮೂಲಕ ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರಗಳು ಸೋಂಕಿನ ಹರಡುವಿಕೆಯನ್ನು ಕಮ್ಮಿ ಮಾಡಿದೆ. ಭಾರತದ ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಮಾತ್ರವಲ್ಲದೆ ಮನೆಯಲ್ಲಿ ಮಾಸ್ಕ್ ತಯಾರಿಸುವ ಕಾರ್ಯಕ್ಕೆ ಭಾರತ ಸರ್ಕಾರ ಹೆಚ್ಚು ಉತ್ತೇಜನವನ್ನು ನೀಡುತ್ತಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಬದಲು ಭಾರತ ಸರ್ಕಾರವು ಐಸಿಎಂಆರ್ ನಿರ್ದೇಶನಗಳನ್ನು ಹೆಚ್ಚು ಪಾಲನೆ ಮಾಡಿ ತನ್ನನ್ನು ತಾನು ಸುರಕ್ಷಿತವಾಗಿಸಿಕೊಳ್ಳುವ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು ಮುಂದಿಟ್ಟಿದೆ. ಒಂದು ವೇಳೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ, ಮಾಸ್ಕ್ ಧರಿಸದೆ ಇದ್ದಿದ್ದರೆ ಅಥವಾ ಪ್ರತ್ಯೇಕ ವಾಸದ ಬದಲು ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ದೊಡ್ಡಮಟ್ಟದ ಪ್ರಮಾದವಾಗುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.