ಮುಂಬೈ: ಕೊರೋನಾ ಕಾಟದಿಂದ ದೇಶದ ಎಲ್ಲಾ ವ್ಯವಹಾರಗಳೂ ಸ್ಥಗಿತಗೊಂಡಿದೆ. ದಿನಗೂಲಿ, ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಡ ಜನರ ಬದುಕು ಬೀದಿಗೆ ಬಿದ್ದಿದೆ. ಇನ್ನು ಭಾರತೀಯ ಚಿತ್ರರಂಗದಲ್ಲಿ ಕೆಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಮನೆಗಳಲ್ಲಿಯೂ ಆಹಾರ ಹೊಂದಿಸಿಕೊಳ್ಳುವುದಕ್ಕೂ ಪರದಾಡುವ ಸ್ಥಿತಿ ಇದ್ದು, ಈ ಸ್ಥಿತಿಯಿಂದ ಅವರನ್ನು ಪಾರು ಮಾಡುವ ಸಲುವಾಗಿ ಬಿಗ್ ಬಿ ಮತ್ತು ಚಿತ್ರರಂಗದ ಇನ್ನೂ ಅನೇಕ ಗಣ್ಯರು ಸೇರಿ ಸಾಮಾಜಿಕ ಕಳಕಳಿಯುಕ್ತ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಇದರಿಂದ ದೊರೆತ ಹಣವನ್ನು ಚಿತ್ರೋದ್ಯಮದಲ್ಲಿ ಕೆಳಹಂತದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ನೀಡಲು ಮುಂದಾಗಿದ್ದಾರೆ.
ʼಫ್ಯಾಮಿಲಿʼ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಅಮಿತಾಬ್, ರಜನೀಕಾಂತ್, ಮಮ್ಮುಟ್ಟಿ, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ, ರಣಭೀರ್ ಕಪೂರ್, ಆಲಿಯಾ ಮೊದಲಾದವರು ಅಭಿನಯಿಸಿದ್ದು, ಅವರವರ ಮನೆಯಲ್ಲಿಯೇ ಅವರವರ ಪಾತ್ರಗಳನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ಬಿಗ್ ಬಿ ಅವರ ಸನ್ ಗ್ಲಾಸ್ ಅನ್ನು ಹುಡುಕುವ ಕುರಿತಾದ ಕಥೆ ಇದೆ. ಇದರ ಜಾಹಿರಾತಿನಿಂದ ದೊರೆತ ಹಣವನ್ನು ಚಿತ್ರರಂಗದ ಬಡ ಕಾರ್ಮಿಕರಿಗೆ ನೀಡಲಾಗುವುದು ಎಂದೂ ತಂಡ ಮಾಹಿತಿ ನೀಡಿದೆ.
ಈ ಹಿಂದೆ ಬಿಗ್ ಬಿ, ಕಲ್ಯಾಣ್ ಜುವೆಲ್ಲರ್ಸ್ ಮತ್ತು ಸೋನಿ ನೆಟ್ವರ್ಕ್ ಸೇರಿ ಸುಮಾರು ಬಡಕೂಟುಂಬಗಳಿಗೆ ತಿಂಗಳ ರೇಷನ್ ವಿತರಿಸುವ ಬಗ್ಗೆ ಮಾಹಿತಿ ನೀಡಿದ್ದರು. ಈಗ ʼಫ್ಯಾಮಿಲಿʼ ಚಿತ್ರದ ಮೂಲಕ ಚಿತ್ರರಂಗದ ಬಡ ಕುಟುಂಬಗಳ ಬಗ್ಗೆಯೂ ಈ ತಂಡ ಕಾಳಜಿ ವಹಿಸಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ಮತ್ತು ಕಲ್ಯಾಣ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ಮಾಡಿರುವ ಈ ಕಿರುಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
You can be distant and you can be social.
A great video with relevant messages. Have a look. https://t.co/acVZRoF1Yd
— Narendra Modi (@narendramodi) April 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.