ಪ್ರತಿಷ್ಠಿತ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಾರ, ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಲು ಆರು ಪ್ರಮುಖ ಕ್ರಮಗಳು ಅತ್ಯಂತ ಅಗತ್ಯವಾಗಿದೆ. ಈಗಾಗಲೇ ಭಾರತ ಯಾರು ಕ್ರಮಗಳ ಮೇಲೆ ಸಾಕಷ್ಟು ಕಾರ್ಯಗಳನ್ನು ಮಾಡಿದೆ.
6 ಕ್ರಮಗಳ ಮೇಲೆ ಒಂದು ನೋಟ
1. ಜನರಿಗೆ ಸ್ಫೂರ್ತಿ ತುಂಬುವುದು ಮತ್ತು ಒಗ್ಗಟ್ಟು ಮೂಡಿಸುವುದು
ಈ ವಿಷಯದಲ್ಲಿ ಭಾರತ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ಈ ದೇಶ ಚಪ್ಪಾಳೆಗಳನ್ನು ತಟ್ಟಿ ಪ್ರೇರೇಪಿಸಿದೆ. 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ, ಕ್ಯಾಂಡಲ್, ಹಣತೆ, ಟಾರ್ಚ್ ಬೆಳಕನ್ನು ಬೆಳಗಿಸಿ ಏಕತೆಯನ್ನು ಪ್ರದರ್ಶಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರ ಮೇಲೆ ಒಬ್ಬರು ಬೀಳುತ್ತಿದ್ದರು ಶಿಸ್ತುಬದ್ಧವಾಗಿ ಕ್ಯೂ ಮೂಲಕ ನಿಲ್ಲುವುದನ್ನು ಕಲಿತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇದೆಲ್ಲಾ ಭಾರತೀಯರಿಗೆ ತೀರಾ ಹೊಸದು. ಆದರೂ ಸರಕಾರದ ನಿಯಮದಂತೆ ಇದನ್ನು ಪಾಲಿಸುತ್ತಿದ್ದಾರೆ.
2. ಏಕೀಕೃತ ಕಮಾಂಡ್ ಸ್ಥಾಪನೆ
ಈ ವಿಷಯದಲ್ಲಿ ಭಾರತ ಅತ್ಯುತ್ತಮವಾದುದನ್ನು ಮಾಡಿದೆ. ಅತಿಶೀಘ್ರದಲ್ಲೇ ಸಾಂಕ್ರಾಮಿಕ ರೋಗದ ವಿರುದ್ಧದ ಸ್ಪಂದನೆಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸೆಂಟ್ರಲ್ ಕಮಾಂಡ್ ಸ್ಥಾಪನೆ ಮಾಡಿದ್ದು, ಇದರ ತಾಂತ್ರಿಕ ತಜ್ಞರು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ. ವಿವಿಧ ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ಕಮಾಂಡ್ಸ್ ನೆರವಿನ ಹಸ್ತವನ್ನು ಚಾಚಿದೆ. ನಿರ್ದಿಷ್ಟ ಸ್ಥಳ ಮತ್ತು ಸಮಯಕ್ಕೆ ಸ್ಪಂದನೆ ನಿಯೋಜನೆ ಮಾಡುವುದು, ಪೂರೈಕೆಗಳನ್ನು ಮಾಡುವುದು ಇತ್ಯಾದಿಗಳನ್ನು ಇದು ನೋಡಿಕೊಳ್ಳುತ್ತದೆ.
3. ಲಕ್ಷಾಂತರ ತಪಾಸಣಾ ಕೇಂದ್ರಗಳ ಲಭ್ಯತೆ
ಭಾರತ ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದೆ. ಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಲು ಪರೀಕ್ಷೆಗಳನ್ನು ಹೆಚ್ಚಿಸಿದೆ ಮತ್ತು ಶಂಕಿತರು ಹಾಗೂ ಸೋಂಕಿತರನ್ನು ಪ್ರತ್ಯೇಕವಾಗಿರುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದೆ. ಸಾಮೂಹಿಕ ಪರೀಕ್ಷೆಗಳು ಸೌತ್ ಕೊರಿಯ ಮತ್ತು ಜರ್ಮನಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ನೀಡಿದೆ. ಭಾರತದಲ್ಲೂ ಪರೀಕ್ಷೆಗಳನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಭಾರತದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಶಂಕಿತರನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಅವರಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
4. ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ರಕ್ಷಣಾ ಪರಿಕರ ಮತ್ತು ಆಸ್ಪತ್ರೆಗಳಿಗೆ ಅತ್ಯುತ್ತಮ ಸೌಲಭ್ಯ
ಭಾರತ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 7.5 ಮಿಲಿಯನ್ ವೈಯಕ್ತಿಕ ರಕ್ಷಣಾ ಪರಿಕರಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಇದರಲ್ಲಿ 1.75 ಲಕ್ಷಗಳನ್ನು ಚೀನಾದಿಂದ ಖರೀದಿಸಲಾಗಿದೆ. ಇವುಗಳನ್ನು ಆರೋಗ್ಯ ಕಾರ್ಯಕರ್ತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಸಾಂಕ್ರಾಮಿಕ ತಡೆ ಮತ್ತು ಬಯೋ ಮೆಡಿಕಲ್ ವೇಸ್ಟ್ ಡಿಸ್ಪೋಸಲ್ ಬಗ್ಗೆಯೂ ತರಬೇತಿಗಳನ್ನು ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲೂ ಸೋಂಕು ತಗಲಬಹುದು ಎಂಬ ಉದ್ದೇಶದಿಂದ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
5. ಜನಸಂಖ್ಯೆಯನ್ನು ಐದು ಗುಂಪುಗಳಾಗಿ ವಿಂಗಡಿಸಿ ಮತ್ತು ಚಿಕಿತ್ಸೆ ನೀಡಿ
ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರೀಕ್ಷೆ ಮತ್ತು ಪ್ರತ್ಯೇಕ ವಾಸದ ನಿಯಮಗಳನ್ನು ಗಂಭೀರತೆಗೆ ಅನುಗುಣವಾಗಿ ವಿಂಗಡಿಸಲಾಗಿದೆ ಹೆಚ್ಚು ಅಪಾಯ ಇರುವವರಿಗೆ, ಕಡಿಮೆ ಅಪಾಯ ಇರುವವರಿಗೆ ಬೇರೆ ಬೇರೆ ರೀತಿಯ ಪ್ರತ್ಯೇಕ ವಾಸದ ಸೌಲಭ್ಯಗಳನ್ನು ನೀಡಲಾಗಿದೆ. ಕೆಲವರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆಶಾ ಕಾರ್ಯಕರ್ತರನ್ನು ಅವರ ಮೇಲೆ ನಿಗಾ ಇಡಲು ನಿಯೋಜಿಸಲಾಗಿದೆ. ಒಬ್ಬರನ್ನು ಹಲವಾರು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೋನಾವೈರಸ್ ರೋಗಕ್ಕಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ.
6. ರಿಯಲ್ ಟೈಮ್ ಮೂಲಭೂತ ಸಂಶೋಧನೆ ಸಂದರ್ಭದಲ್ಲಿ ಕಲಿಕೆ
ಸಾಂಕ್ರಾಮಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವು ಅತಿ ಹೆಚ್ಚು ಪರಿಣತಿ ಹೊಂದಿರುವ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ, ಇದು ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿದೆ. ಲಾಕ್ ಡೌನ್ ಶಿಫಾರಸನ್ನು ಕೂಡ ಈ ಸಮಿತಿಯೇ ಮಾಡಿದ್ದು.
ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಮತ್ತು ಆರ್ಥಿಕತೆ ಪುನರಾರಂಭಕ್ಕೆ ಸಂಬಂಧಿಸಿದಂತೆ ತಜ್ಞರ, ಆರ್ಥಿಕ ಪರಿಣಿತರ ಮತ್ತು ಆರೋಗ್ಯ ತಜ್ಞರ ಸಲಹೆಗಳು ಅತ್ಯಂತ ಅವಶ್ಯಕವಾಗಿದೆ. ಶಾಲಾ ಕಾಲೇಜುಗಳು ಪುನರಾರಂಭಗೊಂಡಾಗ, ಹೋಟೆಲು ಮಾಲ್ಗಳು ಮತ್ತೆ ಆರಂಭವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಸಮಿತಿ ಶಿಫಾರಸು ಮಾಡುತ್ತದೆ. ಈ ಬಿಕ್ಕಟ್ಟು ಭಾರತವೂ ಸೇರಿದಂತೆ ಜಗತ್ತಿಗೆ ಅತ್ಯಂತ ಹೊಸತಾಗಿದೆ. ಹೀಗಾಗಿ ಅತ್ಯಂತ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಬಿಕ್ಕಟ್ಟನ್ನು ಎದುರಿಸುವುದು ಜಾಣತನವಾಗಿದೆ. ಭಾರತ ಈ ನಿಟ್ಟಿನಲ್ಲಿ ಸಮರ್ಥವಾಗಿಯೇ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.