ಲಕ್ನೋ : ಖ್ಯಾತ ಶಿಕ್ಷಣ ತಜ್ಞ, ಪದ್ಮಶ್ರೀ ಪುರಸ್ಕೃತ ಐಐಟಿ ಕಾನ್ಪುರದ ನಿವೃತ್ತ ಪ್ರೊಫೆಸರ್ ಎಚ್. ಸಿ. ವರ್ಮಾ ಅವರು ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಹೊಸತೊಂದು ಯೋಜನೆಗೆ ಮುಂದಾಗಿದ್ದಾರೆ.
ಜನರನ್ನು ಮನೆಯಿಂದ ಹೊರ ಬರದಂತೆ ಸರ್ಕಾರ ತಿಳಿಸಿರುವ ಬೆನ್ನಲ್ಲೇ, ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಫಿಸಿಕ್ಸ್ ಮನನ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗುವಂತೆ ಆನ್ಲೈನ್ ಫಿಸಿಕ್ಸ್ ತರಗತಿಗಳನ್ನು ಆರಂಭಿಸಿ, ಮಾದರಿ ಹೆಜ್ಜೆಯನ್ನು ಇರಿಸಿದ್ದಾರೆ. ಸೆಂಟರ್ ಆಫ್ ಕಂಟಿನ್ಯುವಸ್ ಎಜುಕೇಶನ್ ಮತ್ತು ಐಐಟಿ-ಕೆ ಯ ಸಹಯೋಗದ ಜೊತೆಗೆ ʼಸ್ಟೇ ಹೋಂ ರಿವೈಸ್ ಫಿಸಿಕ್ಸ್ʼ ಎಂಬ ಭೌತಶಾಸ್ತ್ರದ ಆನ್ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ.
ಈ ಕೋರ್ಸ್ ಬಗ್ಗೆ ಮಾಹಿತಿ ನೀಡಿದ ಐಐಟಿ-ಕೆ ಪ್ರಾಧ್ಯಾಪಕ ಅಭಯ್ ಕರಂದಿಕಾರ್ ಅವರು, ಈ ತರಗತಿಗಳು ಎಲ್ಲಾ ಭೌತಶಾಸ್ತ್ರ ವಿದ್ಯಾರ್ಥಿಗಳಿಗೂ ಸಂಬಂಧಪಟ್ಟಂತೆ ಇದ್ದು, ಮನೆಯಲ್ಲಿಯೇ ಕುಳಿತು ಕಲಿಯುವುದಕ್ಕೆ ಇದು ಸಹಾಯಕವಾಗಲಿದೆ. ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಮತ್ತು ಕಲಿಯಿರಿ ಎಂದೂ ಅವರು ತಿಳಿಸಿದ್ದಾರೆ.
ಈ ಬಗ್ಗೆ ವರ್ಮಾ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದು 8 ವಾರಗಳ ಕೋರ್ಸ್ ಆಗಿದ್ದು, ಮನೆಯಲ್ಲಿಯೇ ಕುಳಿತು ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಪೂರಕವಾಗಲಿದೆ. ಈ ತರಗತಿಗಳ ಸದುಪಯೋಗ ಪಡೆದುಕೊಂಡು ಅಧ್ಯಯನ ನಡೆಸುವಂತೆ ಅವರು ತಿಳಿಸಿದ್ದಾರೆ.
In the time of this lockdown due to #COVID19, when students are forced to study at home.@HRDMinistry @DrRPNishank @PIBHRD .@UPGovt .@PMOIndia .@mygovindia .@AICTE_INDIA #IndiaFightsCorona #StayHomeStaySafe
— Abhay Karandikar (@karandi65) March 31, 2020
ಇನ್ನು ಎಚ್. ಚಂದ್ರ ವರ್ಮಾ ಅವರಿಗೆ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕಾಗಿ ದೇಶದ ನಾಲ್ಕನೇ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.