ಜಿನೆವಾ: ಮಾರಣಾಂತಿಕ ಕೊರೊನಾವೈರಸ್ನಿಂದ ಜಾಗತಿಕ ಸಾವಿನ ಸಂಖ್ಯೆ 7,000 ಗಡಿಯನ್ನು ದಾಟಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರಣಾಂತಿಕ ವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ನೈರ್ಮಲ್ಯದ ಮಹತ್ವವನ್ನು ತಿಳಿಯಲು ‘ಸುರಕ್ಷಿತ ಕೈಗಳ ಸವಾಲು(ಸೇಫ್ ಹ್ಯಾಂಡ್ ಚಾಲೆಂಜ್)’ ಅನ್ನು ಪ್ರಾರಂಭಿಸಿದೆ. ಕೊರೋನವೈರಸ್ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡುವ ಸಲುವಾಗಿ ಸ್ವಚ್ಛ ಕೈಗಳ ಬಗ್ಗೆ ಅರಿವು ಮೂಡಿಸಿದೆ. ಈ ಬಗೆಗಿನ ವಿಡಿಯೋವನ್ನು WHO ಹಂಚಿಕೊಂಡಿದೆ.
ಕೈ ತೊಳೆಯುವ ಮಹತ್ವವನ್ನು ತಿಳಿಸುವ ಬಗೆಗಿನ ವಿಡಿಯೋವನ್ನು WHO ಹಂಚಿಕೊಂಡಿದ್ದು, ಈ ಚಾಲೆಂಜ್ನಲ್ಲಿ ಭಾಗಿಯಾಗುವಂತೆ ವಿಶ್ವದ ಜನರಿಗೆ ಕರೆಯನ್ನು ನೀಡಿದೆ.
“COVID19 ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಪ್ರತಿಯೊಬ್ಬರೂ ಮಾಡಬೇಕಾದ ಸರಳ ಕೆಲಸಗಳಿವೆ, ಇದರಲ್ಲಿ ಸೋಪ್ ಮೂಲಕ ಅಥವಾ ಆಲ್ಕೋಹಾಲ್ ಆಧಾರಿತ ರಬ್ ಬಳಸಿ ಕೈತೊಳೆಯುವುದು ಸೇರಿದೆ” ಎಂದು ಟ್ವೀಟ್ ಮಾಡಿದೆ.
”# ಕೊರೋನವೈರಸ್ ವಿರುದ್ಧ ಹೋರಾಡಲು ಸ್ವಚ್ಛವಾದ ಕೈಗಳನ್ನು ಉತ್ತೇಜಿಸಲು WHO # ಸೇಫ್ ಹ್ಯಾಂಡ್ಸ್ ಚಾಲೆಂಜ್ ಅನ್ನು ಪ್ರಾರಂಭಿಸುತ್ತಿದೆ” ಎಂದಿದೆ.
”ಸವಾಲಿಗೆ ಸೇರಿ ಮತ್ತು ನಿಮ್ಮ ಕೈ ತೊಳೆಯುವ ವೀಡಿಯೊವನ್ನು ಹಂಚಿಕೊಳ್ಳಿ! ”ಎಂದು WHO ಟ್ವೀಟ್ನಲ್ಲಿ ತಿಳಿಸಿದೆ.’
There are simple things we each must do to protect ourselves from #COVID19, including 👐 washing with 🧼 & 💦 or alcohol-based rub.
WHO is launching the #SafeHands Challenge to promote the power of clean 👐 to fight #coronavirus.
Join the challenge & share your 👐 washing video! pic.twitter.com/l7MDw1mwDl— World Health Organization (WHO) (@WHO) March 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.