ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಬಾಂಗ್ಲಾದೇಶದೊಂದಿಗಿನ ಕ್ರಾಸ್ ಬಾರ್ಡರ್ ಪ್ರಯಾಣಿಕ ಬಸ್ ಮತ್ತು ರೈಲು ಸೇವೆಗಳನ್ನು ಏಪ್ರಿಲ್ 15 ರವರೆಗೆ ಸ್ಥಗಿತಗೊಳಿಸುವುದಾಗಿ ಮತ್ತು ನಾಲ್ಕು ನೆರೆಯ ರಾಷ್ಟ್ರಗಳೊಂದಿಗಿನ 18 ವಲಸೆ ಚೆಕ್ಪೋಸ್ಟ್ಗಳನ್ನು ಮುಚ್ಚುವುದಾಗಿ ಭಾರತ ಶುಕ್ರವಾರ ಪ್ರಕಟಿಸಿದೆ.
ಕೊರೋನವೈರಸ್ ಪೀಡಿತ ಇರಾನ್ ಮತ್ತು ಇಟಲಿಯಂತಹ ರಾಷ್ಟ್ರಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿವೆ, ವಾರಾಂತ್ಯದಲ್ಲಿ ಮೂರು ರಾಷ್ಟ್ರಗಳಿಗೆ ವಿಮಾನವನ್ನು ಈ ಉದ್ದೇಶಕ್ಕಾಗಿ ಕಳುಹಿಸಿಕೊಡುತ್ತಿದೆ.
ಕರ್ತಾರ್ಪುರ ಕಾರಿಡಾರ್ ಮೂಲಕ ಪಾಕಿಸ್ಥಾನದ ಗುರುದ್ವಾರ ದರ್ಬಾರ್ ಸಾಹಿಬ್ಗೆ ಭಾರತೀಯ ಯಾತ್ರಾರ್ಥಿಗಳ ಪ್ರಯಾಣ ಮುಂದುವರಿಯಲಿದೆ, ಆದರೆ ಈ ವಿಷಯವು ಇನ್ನೂ ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅನಿಲ್ ಮಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಾರದ ದಿನಗಳಲ್ಲಿ ಸುಮಾರು 300 ರಿಂದ 400 ಜನರು ಕಾರಿಡಾರ್ ಅನ್ನು ಬಳಸುತ್ತಾರೆ ಮತ್ತು ವಾರಾಂತ್ಯದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಎಂದಿದ್ದಾರೆ.
ಸರಕು ಸಾಗಣೆ ರೈಲು ಸೇವೆಗಳು ಮುಂದುವರಿಯುತ್ತಿದ್ದರೂ ಗಡಿಯಾಚೆಗಿನ ಪ್ರಯಾಣಿಕರ ಬಸ್ ಮತ್ತು ಬಾಂಗ್ಲಾದೇಶಕ್ಕೆ ರೈಲು ಸೇವೆಗಳನ್ನು ಮಾರ್ಚ್ 15 ರಿಂದ ಏಪ್ರಿಲ್ 15 ರವರೆಗೆ ಸ್ಥಗಿತಗೊಳಿಸಲಾಗುತ್ತದೆ. ಮುಂದಿನ ಆದೇಶದವರೆಗೆ ಈಶಾನ್ಯ ರಾಜ್ಯಗಳ ಬಾಂಗ್ಲಾದೇಶದ ಗಡಿಯುದ್ದಕ್ಕೂ ಗಡಿ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
37 ಭೂ ವಲಸೆ ಚೆಕ್ಪೋಸ್ಟ್ಗಳ ಪೈಕಿ 19ರ ಮೂಲಕ ಮಾತ್ರ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಲಿದ್ದು, ಉಳಿದವುಗಳನ್ನು ಶನಿವಾರ ಮಧ್ಯರಾತ್ರಿಯಿಂದ ಮುಚ್ಚಲಾಗುವುದು ಎಂದು ಮಲಿಕ್ ತಿಳಿಸಿದ್ದಾರೆ. ಚೆಕ್ಪೋಸ್ಟ್ಗಳ ಮೂಲಕ ಭಾರತಕ್ಕೆ ಪ್ರವೇಶಿಸುವ ಜನರನ್ನು ಉತ್ತಮವಾಗಿ ಪರೀಕ್ಷಿಸಲು ಅನುಕೂಲವಾಗುವಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅಸ್ಸಾಂ, ಬಿಹಾರ, ಮೇಘಾಲಯ, ಮಿಜೋರಾಂ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಮಯನ್ಮಾರ್ ಗಡಿಯುದ್ದಕ್ಕೂ 19 ಚೆಕ್ಪೋಸ್ಟ್ಗಳು ತೆರೆದಿರುತ್ತವೆ. ನೇಪಾಳ ಮತ್ತು ಭೂತಾನ್ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶ ಮುಂದುವರಿಯುತ್ತದೆ, ಆದರೂ ಚೆಕ್ಪೋಸ್ಟ್ಗಳಲ್ಲಿ ವೈದ್ಯಕೀಯ ತಪಾಸಣೆ ವಿಮಾನ ನಿಲ್ದಾಣಗಳಲ್ಲಿರುವಂತೆಯೇ ಇರುತ್ತದೆ ಎಂದು ಮಲಿಕ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.