ಬೆಂಗಳೂರು: ಬೆಂಗಳೂರಿನಲ್ಲಿ ಮಾರ್ಚ್ 15 ರಿಂದ ನಡೆಯಬೇಕಿದ್ದ ಆರ್ಎಸ್ಎಸ್ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)ಯನ್ನು ರದ್ದುಪಡಿಸಲಾಗಿದೆ. ಕೊರೋನವೈರಸ್ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳು ಮತ್ತು ಸಲಹೆಗಳ ಹಿನ್ನಲೆಯಲ್ಲಿ ಎಬಿಪಿಎಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಆರ್ಎಸ್ಎಸ್ ಸಹಕಾರ್ಯವಾಹ ಸುರೇಶ್ ಭೈಯಾಜಿ ಜೋಶಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮತ್ತು ಸವಾಲನ್ನು ಯಶಸ್ವಿಯಾಗಿ ಎದುರಿಸುವ ಪ್ರಯತ್ನಗಳಿಗೆ ಕೈಜೋಡಿಸಬೇಕೆಂದು ಭೈಯಾಜಿ ಜೋಶಿ ಎಲ್ಲಾ ಸ್ವಯಂಸೇವಕರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಕೊರೋನವೈರಸ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ದೊಡ್ಡ ಕೂಟಗಳು, ಕಾರ್ಯಗಳು ಮತ್ತು ಸಮಾರಂಭಗಳನ್ನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರವೂ ನಿರ್ದೇಶನ ನೀಡಿದೆ. ಮಾಲ್ಗಳು ಮತ್ತು ಸಿನೆಮಾ ಹಾಲ್ಗಳನ್ನು ಕೂಡ ಕರ್ನಾಟಕದಾದ್ಯಂತ ಒಂದು ವಾರ ಮುಚ್ಚುವಂತೆ ಹೇಳಲಾಗಿದೆ.
ಎಬಿಪಿಎಸ್ನಲ್ಲಿ ಭಾಗವಹಿಸುವವರನ್ನು ಪರೀಕ್ಷೆಗೊಳಪಡಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು, ಆದರೂ ಮುಂಜಾಗ್ರತಾ ಕ್ರಮವಾಗಿ ಎಬಿಪಿಎಸ್ ಅನ್ನು ರದ್ದುಪಡಿಸುವ ಕರೆ ತೆಗೆದುಕೊಳ್ಳಲಾಗಿದೆ. ಆರ್ಎಸ್ಎಸ್ ಮೂಲಗಳು ಹೇಳುವಂತೆ ಸ್ವಯಂಸೇವಕರು ಆಯಾ ಕಾರ್ಯಕ್ಷೇತ್ರಗಳಲ್ಲಿ ಕೊರೋನವೈರಸ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ ಮತ್ತು ಈ ಬೆದರಿಕೆಯನ್ನು ಎದುರಿಸುವಲ್ಲಿ ದೇಶಕ್ಕೆ ಸಹಾಯ ಮಾಡಲಿದ್ದಾರೆ.
Statement by Sarakaryavah, Shri Suresh (Bhayyaji) Joshi : pic.twitter.com/ZA0DjLattE
— RSS (@RSSorg) March 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.