ಬೆಂಗಳೂರು : ಮಹಾಮಾರಿ ಕೊರೋನವೈರಸ್ನಿಂದ ಸಾರ್ವಜನಿಕ ವಲಯದಲ್ಲಿ ಭಯ ಉಂಟಾಗಿದ್ದರೆ, ಈ ಸಂದರ್ಭದ ಸಂಪೂರ್ಣ ಲಾಭ ಪಡೆಯುವುದಕ್ಕೆಂದೇ ಕೆಲವು ಔಷಧ ಮಾರಾಟ ಮಳಿಗೆಗಳು ಹೊರಟಿವೆ. ಸೋಂಕು ಹರಡುವ ಭಯದಿಂದ ಜನರು ಮಾಸ್ಕ್, ಔಷಧಗಳನ್ನು ಕೊಳ್ಳುವುದಕ್ಕೆ ಹೋದರೆ, ಅವುಗಳಿಗೆ ದುಪ್ಪಟ್ಟು ಬೆಲೆ ಹೇಳಿ ಜನರನ್ನು ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿವೆ. ಇಂತಹ ದುರ್ವರ್ತನೆಯ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಗರಂ ಆಗಿದ್ದಾರೆ.
ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡಿ ಮೋಸ ಮಾಡುತ್ತಿರುವ ಔಷಧ ಮಾರಾಟ ಮಳಿಗೆಗಳು ಕಂಡುಬಂದಲ್ಲಿ, ಅಂತಹವುಗಳ ವಿರುದ್ಧ ಕ್ರಮ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೀಗೆ ಜನರ ರಕ್ತ ಹೀರುವ ಕೆಲಸ ಮಾಡುವ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ಸಚಿವರು ನೀಡಿದ್ದಾರೆ.
ಕೊರೋನಾದ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡುವ, ಅದರಿಂದ ರಕ್ಷಿಸಿಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊರೋನಾ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನೂ ಹಮ್ಮಿಕೊಂಡಿದ್ದು, ಶಾಲಾ ಕಾಲೇಜು, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸದಂತೆಯೂ ಆದೇಶ ಜಾರಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.