ಜೆರುಸೆಲಂ: ಇಸ್ರೇಲ್ನ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಕೊರೋನವೈರಸ್ಗೆ ಔಷಧಿ ಕಂಡು ಹಿಡಿಯವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದಾರೆ. ಕೊರೋನವೈರಸ್ ಹರಡಲು SARS-CoV-2 ವೈರಸ್ ಕಾರಣ ಎಂಬುದನ್ನು ಅರ್ಥಮಾಡಿಕೊಂಡಿರುವ ವಿಜ್ಞಾನಿಗಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದಾರೆ.
ಪ್ರಸ್ತುತ ಇಸ್ರೇಲ್ ಸಂಶೋಧಕರು ಈಗಾಗಲೇ ಲಸಿಕೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈ ಬಗ್ಗೆ ಶೀಘ್ರದಲ್ಲೇ ಘೋಷಣೆಯನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ತಮ್ಮ ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ವೈರಸ್ನ ಜೈವಿಕ ಕಾರ್ಯವಿಧಾನ ಮತ್ತು ಗುಣಗಳನ್ನು ಅರ್ಥಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಲಸಿಕೆ ಅಭಿವೃದ್ಧಿಯ ಜೊತೆಗೆ, ಅವರ ಅಧ್ಯಯನದ ವ್ಯಾಪ್ತಿಯು ರೋಗನಿರ್ಣಯದ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಈಗಾಗಲೇ ವೈರಸ್ನ್ನು ಸಂಪರ್ಕಿಸಿದವರಿಗೆ ಉತ್ತಮ ಆ್ಯಂಟಿ ಬಯೋಟಿಕ್ ತಯಾರಿಸುವುದನ್ನು ಒಳಗೊಂಡಿದೆ.
ಲಸಿಕೆಯ ಬೆಳವಣಿಗೆಯ ಬಗ್ಗೆ ಘೋಷಣೆ ಮಾಡುವ ಬದಲು, ಮಾರುಕಟ್ಟೆಗೆ ಸಿದ್ಧವಾಗುವುದಕ್ಕೂ ಮೊದಲು ಇದನ್ನು ವಿವಿಧ ಪರೀಕ್ಷೆಗಳು ಮತ್ತು ಪ್ರಯೋಗಗಳಿಗೆ ಒಳಪಡಿಸಲಾಗುತ್ತದೆ. ಪ್ರಾಣಿಗಳು ಮತ್ತು ಮಾನವರ ಮೇಲಿನ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಳ್ಳಲು ತಿಂಗಳು ತೆಗೆದುಕೊಳ್ಳುತ್ತದೆ ಆದರೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಪ್ರಕ್ರಿಯೆಯನ್ನು ವೇಗಗೊಳಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.