ನವದೆಹಲಿ: ವಿಶ್ವದಾದ್ಯಂತ ಕೊರೋನವೈರಸ್ ಸೃಷ್ಟಿಸಿರುವ ಅವಾಂತರ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಸೋಂಕಿನ ಭಯದಲ್ಲಿ ಇಡೀ ಪ್ರಪಂಚವೇ ನಲುಗಿ ಹೋಗಿದ್ದು, ಅನೇಕ ಮುಂಜಾಗ್ರತಾ ಕ್ರಮಗಳನ್ನೂ ವಹಿಸುತ್ತಿದೆ. ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿವೆ. ಭಾರತದಲ್ಲಿಯೂ ಕೊರೋನ ಸೋಂಕು ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳೂ ತುರ್ತು ಕ್ರಮಗಳನ್ನು, ಮುಂಜಾಗ್ರತೆಯನ್ನೂ ವಹಿಸುತ್ತಾ ಬಂದಿವೆ.
ಕೊರೋನ ಸೋಂಕಿತರಿಗೆ ಸಹಾಯವಾಗುವಂತೆ ಪ್ರಸ್ತುತ ಕೇಂದ್ರ ಸರ್ಕಾರ ತುರ್ತು ಸಹಾಯವಾಣಿಯನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಭದ್ರತೆ ಒದಗಿಸಲು ಮುಂದಾಗಿದೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಆಯಾಯ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ತುರ್ತು ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ತುರ್ತು ಸಹಾಯವಾಣಿ ಸಂಖ್ಯೆ 104 ಆಗಿದೆ. ಈ ಸಂಖ್ಯೆಗೆ ಕರೆ ನೀಡುವ ಮೂಲಕ ತಮ್ಮ ಸಂದೇಹ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಲಾಗಿದೆ.
ಉಳಿದ ರಾಜ್ಯಗಳ ಸಹಾಯವಾಣಿ ಹೀಗಿದೆ:-
🔹 ಆಂಧ್ರಪ್ರದೇಶ- 0866241078 🔹 ಅರುಣಾಚಲ ಪ್ರದೇಶ-9436055743 🔹 ಅಸ್ಸಾಂ-6913347770 🔹 ಛತ್ತಿಸ್ ಘಡ್-07712235091
🔹ನವದೆಹಲಿ-01122307145 🔹 ಹರ್ಯಾಣ-8558893911 🔹 ಜಮ್ಮು-01912520982 🔹 ಕಾಶ್ಮೀರ-01942440283
🔹 ಕೇರಳ-04712552056 🔹 ಲಡಾಕ್- 01982256462 🔹 ಮಧ್ಯಪ್ರದೇಶ- 0755-2527177 🔹 ಮಹಾರಾಷ್ಟ್ರ- 020-26127394
🔹 ನಾಗಾಲ್ಯಾಂಡ್- 7005539653 🔹 ಒರಿಸ್ಸಾ-9439994859 🔹 ರಾಜಸ್ಥಾನ್-01412225624 🔹 ತಮಿಳುನಾಡು-04429510500
🔹 ತ್ರಿಪುರಾ-03812315879 🔹 ಉತ್ತರಪ್ರದೇಶ-18001805145 🔹 ಪಶ್ಚಿಮ ಬಂಗಾಳ-3323412600
🔹 ಅಂಡಮಾನ್ ಮತ್ತು ನಿಕೋಬಾರ್ -03192232102
ಬಿಹಾರ, ಗೋವಾ, ಗುಜರಾತ್, ಹಿಮಾಚಲಪ್ರದೇಶ, ಜಾರ್ಖಂಡ್ , ಕರ್ನಾಟಕ, ಪಂಜಾಬ್, ಸಿಕ್ಕಿಂ, ತೆಲಂಗಾಣ, ಉತ್ತರಾಖಂಡ್, ದಾದ್ರ ಮತ್ತು ಹವೇಲಿ, ದಿಯು ಮತ್ತು ದಾಮನ್, ಲಕ್ಷದೀಪ, ಪುದುಚೇರಿ ಜನರು 104 ಸಂಖ್ಯೆಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದು.
ಮೇಘಾಲಯ ಮತ್ತು ಮಿಜೋರಾಂ ಜನರು 108 ಮತ್ತು 102 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.