ನವದೆಹಲಿ: ಕೊರೋನವೈರಸ್ ಮಹಾಮಾರಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಗುರುವಾರ ಕೆಲವೊಂದು ಸಲಹೆಗಳನ್ನು ಹೊರಡಿಸಿದೆ. ಹೀಗಾಗಿ, ಇದರಡಿಯಲ್ಲಿ ನೋಂದಾಯಿತಗೊಂಡಿರುವ ಐಟಿ ಘಟಕಗಳ ಸುಮಾರು 18-20 ಲಕ್ಷ ಉದ್ಯೋಗಿಗಳು ಇನ್ನು ಮುಂದೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.
ಕೊರೋನವೈರಸ್ ಹಿನ್ನಲೆಯಲ್ಲಿ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವ ಸಲುವಾಗಿ ನಿರ್ಬಂಧಗಳನ್ನು ಸಡಿಲಿಸುವಂತೆ ಐಟಿ ಉದ್ಯಮದ ಸಂಸ್ಥೆ NASSCOM ಸರ್ಕಾರವನ್ನು ಒತ್ತಾಯಿಸುತ್ತಿದೆ.
ಪ್ರಸ್ತುತ, OSP (ಇತರ ಸೇವಾ ಪೂರೈಕೆದಾರರು) ಆಡಳಿತದಲ್ಲಿ WFH (ವರ್ಕ್ ಫ್ರಂ ಹೋಂ) ಗೆ ನಿರ್ಬಂಧಗಳಿವೆ.
“ಕೆಲವು ಸನ್ನಿವೇಶಗಳಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವ ನಿಯಮಗಳಿವೆ. ನಾವು ಅದರಂತೆ ಷರತ್ತುಗಳನ್ನು ಹೊರಡಿಸಿದ್ದೇವೆ ಮತ್ತು ಅದನ್ನು ಕಾರ್ಯಗತಗೊಳಿಸುವಂತೆ ನಮ್ಮೊಂದಿಗೆ ನೋಂದಾಯಿಸಿಕೊಂಡಿರುವ ಎಲ್ಲಾ ಘಟಕಗಳನ್ನು ಪ್ರೇರೇಪಿಸುತ್ತೇವೆ. ಸುಮಾರು 3,000 ರಫ್ತುದಾರರು ನಮ್ಮೊಂದಿಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು ಸುಮಾರು 18-20 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ” ಎಂದು ಎಸ್ಟಿಪಿಐ ಮಹಾನಿರ್ದೇಶಕ ಓಂಕರ್ ರಾಯ್ ತಿಳಿಸಿದ್ದಾರೆ.
ಸಾಫ್ಟ್ವೇರ್ ರಫ್ತುದಾರರಿಗೆ ಸಾಗರೋತ್ತರ ಸೌಲಭ್ಯಗಳು ಮತ್ತು ನಿಯಮಗಳನ್ನು ಮೇಲ್ವಿಚಾರಣೆ ಮಾಡುವ ಎಸ್ಟಿಪಿಐ ಹೊರಡಿಸಿದ ತುರ್ತು ಸಲಹೆಯಂತೆ, ಕೊರೋನವೈರಸ್ ಹಿನ್ನೆಲೆಯಲ್ಲಿ ಘಟಕಗಳ ನೌಕರರು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಬಳಸಿ ಮನೆಯಿಂದ ಕೆಲಸ ಮಾಡುವ ಅಗತ್ಯವಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.