ಮಂಗಳೂರು : ದಕ್ಷಿಣ ಭಾರತದ ನೆಚ್ಚಿನ ಟೆಕ್ಸ್ಟೈಲ್ ಬ್ರ್ಯಾಂಡ್ ಜಯಲಕ್ಷ್ಮಿ ಇದರ ಬೃಹತ್ ಮಳಿಗೆ ಮಂಗಳೂರಿನ ಬಿಜೈಯ ಭಾರತ್ಮಾಲ್ 2 ನೂತನ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡಿತು. ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ದ. ಕ. ಖ್ಹಾಜಿ ತ್ವಾಖಾ ಅಹ್ಮದ್ ಅಲ್-ಅಝ್ಹರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ನೂತನ ಮಳಿಗೆಯ ಉದ್ಘಾಟನೆ ನೆರವೇರಿಸಿದರು.
ದ. ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕ ಜೆ. ಆರ್. ಲೋಬೊ, ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಮನಪಾ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ವೇದಾವತಿ, ಕಾರ್ಪೋರೇಟರ್ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಶಕಿಲಾ ಕಾವ, ಪೂರ್ಣಿಮಾ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹೆಮ್ಮೆಯ ಕೊಡುಗೆ :
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ‘ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಜಯಲಕ್ಷ್ಮಿಯ ಬೃಹತ್ ಮಳಿಗೆ ಹೆಮ್ಮೆಯ ಕೊಡುಗೆಯಾಗಿದೆ. 400 ಕ್ಕೂ ಮಂದಿಗೆ ಇಲ್ಲಿ ಉದ್ಯೋಗಾವಕಾಶ ದೊರೆತಿದೆ. ಕೇರಳ ರಾಜ್ಯದಲ್ಲಿ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನ ಗೆದ್ದಿರುವ ಜಯಲಕ್ಷ್ಮಿಯ ಮಂಗಳೂರು ಮಳಿಗೆಯಲ್ಲಿ ವಸಗಳ ಅಪೂರ್ವ ಸಂಗ್ರಹವಿದ್ದು ಎಲ್ಲ ವರ್ಗದ ಗ್ರಾಹಕರಿಗೆ ವರದಾನವಾಗಿದೆ’ ಎಂದರು.
ಜಯಲಕ್ಷ್ಮಿ ಸಂಸ್ಥೆಯ ಚೇರ್ಮನ್ ನಾರಾಯಣ ಕಾಮತ್, ಜಂಟಿ ಆಡಳಿತ ನಿರ್ದೇಶಕರಾದ ಗೋವಿಂದ ಕಾಮತ್, ಸತೀಶ್ ಕಾಮತ್, ಕಾರ್ಯ ನಿರ್ವಾಹಕ ನಿರ್ದೇಶಕ ಸುಜೀತ್ ಕಾಮತ್, ಮಂಗಳೂರು ಮಳಿಗೆಯ ಮುಖ್ಯಸ್ಥ ರಾಜೇಂದ್ರ ಉಳ್ಳಾಲ್, ಸ್ಟೋರ್ ಮ್ಯಾನೇಜರ್ಗಳಾದ ಅನೀಶ್, ಅಜಿತ್, ರಾಜೀವ್ , ಭಾರತ್ ಮಾಲ್ನ ಪಾಲುದಾರರಾದ ಸುಬ್ರಾಯ ಪೈ, ಆನಂದ ಪೈ, ಸುಧೀರ್ ಪೈ , ವೆಂಕಟೇಶ್ ಪೈ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಅತೀ ದೊಡ್ಡ ಮಳಿಗೆ
ಬಿಜೈಯಲ್ಲಿ ಆರಂಭವಾಗಿರುವ ಜಯಲಕ್ಷ್ಮಿಯ ನೂತನ ಮಳಿಗೆ ಕರ್ನಾಟಕದಲ್ಲೇ ಅತೀ ದೊಡ್ಡ ಟೆಕ್ಸ್ಟೈಲ್ ಮಳಿಗೆಯಾಗಿದೆ. ಒಂದು ಲಕ್ಷ ಚದರ ಅಡಿಯ 4 ಮಹಡಿಗಳ ಈ ಬೃಹತ್ ಮಾಲ್ ವಿಶಿಷ್ಟ ಶಾಪಿಂಗ್ ಅನುಭವ ನೀಡಲಿದೆ. ಬ್ರೈಡಲ್, ಡಿಸೈನರ್, ವೈವಾಹಿಕ ರೇಷ್ಮೆ ಸೀರೆಗಳು, ಬ್ರೈಡಲ್ ಕಾಂಚೀಪುರಂ ರೇಷ್ಮೆ, ಟಸ್ಸರ್ ರೇಷ್ಮೆ, ಪಾಶ್ಚಿಮಾತ್ಯ ಉಡುಪಿನ ಸೀರೆಗಳು, ಕಾಟನ್ ಸೀರೆಗಳು, ಜೂಟ್ ರೇಷ್ಮೆ, ಶಿ-ನ್ ಸೀರೆಗಳು ಮತ್ತು ಚಂದೇರಿ ಸೀರೆಗಳ ಅಪೂರ್ವ ಸಂಗ್ರಹ ಇಲ್ಲಿದೆ. ಚೂಡಿದಾರ್, ಪಾಶ್ಚಿಮಾತ್ಯ ಉಡುಪುಗಳು ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ಸಂಗ್ರಹವಿದೆ.
ವಿಶಾಲ ಪಾರ್ಕಿಂಗ್
ಬಹುಮಹಡಿ ಕಟ್ಟಡದಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್,ಡ್ರೆಸ್ ಮೆಟೀರಿಯಲ್ಸ್, ಎತ್ನಿಕ್ ವೇರ್, (ನೆಲ ಮಹಡಿಯಲ್ಲಿ), ಮಕ್ಕಳ ಉಡುಗೆ ತೊಡುಗೆ, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿ), ಪುರುಷರ ಉಡುಗೆ ತೊಡುಗೆ, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪು (2ನೇ ಮಹಡಿಯಲ್ಲಿ) ಲೆಹೆಂಗಾ ಮತ್ತು ಸೀರೆಗಳ ಸಂಗ್ರಹ (3ನೇ ಮಹಡಿಯಲ್ಲಿ) ಇರಿಸಲಾಗಿದೆ. ಗ್ರಾಹಕರ ಪುಟ್ಟ ಮಕ್ಕಳಿಗಾಗಿ ಪ್ರತ್ಯೇಕ ಆಟದ ಸ್ಥಳ ಮೀಸಲಿರಿಲಾಗಿದೆ. ಕಾರ್ ಪಾರ್ಕಿಂಗ್ಗಾಗಿ ನೆಲಮಾಳಿಗೆಯಲ್ಲಿರುವ 2 ಮಹಡಿಗಳನ್ನು ಕಾಯ್ದಿರಿಸಿದ್ದು, 250 ವಾಹನಗಳ ಪಾರ್ಕಿಂಗ್ಗೆ ಅವಕಾಶವಿದೆ.
ಅತ್ಯಪೂರ್ವ ಸಂಗ್ರಹ
1947 ರಲ್ಲಿ ಕೊಚ್ಚಿನ್ನಲ್ಲಿ ಸ್ಥಾಪನೆಯಾದ ಜಯಲಕ್ಷ್ಮಿ ಮಳಿಗೆ ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್ನಲ್ಲಿ ಭವ್ಯ ಶೋ ರೂಂ ಹೊಂದಿದ್ದು ಈಗ ಮಂಗಳೂರಿಗೆ ವಿಸ್ತರಿಸಿದೆ. ಜಯಲಕ್ಷ್ಮಿ ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನ, ಅದ್ಭುತ ಸಂಗ್ರಹ ಮತ್ತು ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ. ವ್ಯಾಪಕ ಸಂಗ್ರಹದ, ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ ಜವಳಿ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣತಿ ಹೊಂದಿದೆ. ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಷನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದೆ. ಪ್ರತಿಯೊಂದು ವಿಭಾಗದ ಜನರ ಅಭಿರುಚಿ ಪೂರೈಸಲು ಸಜ್ಜಾಗಿದೆ. ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೋ ರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು 500 ಕ್ಕೂ ಹೆಚ್ಚು ಉತ್ಸಾಹಿ ಸಿಬ್ಬಂದಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತಾರಾಷ್ಟ್ರೀಯ ಶಾಪಿಂಗ್ ಅನುಭವ ನೀಡಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.