ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ಭಯದಿಂದ ನಲುಗುವಂತೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವಾಗ ಶೇಕ್ ಹ್ಯಾಂಡ್ ಮಾಡುವ ಹವ್ಯಾಸವನ್ನು ಅಳವಡಿಸಿಕೊಂಡಿರುವ ದೇಶಗಳೂ, ಭಾರತದ ನಮಸ್ತೇ ಪದ್ದತಿಯನ್ನೇ ಅನುಸರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ.
ಕೈ ಕುಲುಕಿದರೆ ಎಲ್ಲಿ ಕೊರೋನವೈರಸ್ ತಮ್ಮ ದೇಹದೊಳಕ್ಕೂ ಪ್ರವೇಶ ಮಾಡಿ ಬಿಡುವುದೋ ಎಂಬ ಭಯದಿಂದ ವಿದೇಶಿ ಪ್ರಜೆಗಳೂ ಕೈ ಜೋಡಿಸಿ ನಮಸ್ತೆ ಎಂದು ವಿಶ್ ಮಾಡುತ್ತಿದ್ದಾರೆ. ಇನ್ನು ಇಸ್ರೇಲ್ನಲ್ಲಿ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರು ಶೇಕ್ ಹ್ಯಾಂಡ್ ಮಾಡದಂತೆ ಜನತೆಗೆ ಮನವಿ ಮಾಡಿದ್ದು, ನಮಸ್ತೆ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ, ಅನುಸರಣೆ ಮಾಡುವಂತೆ ತಿಳಿಸಿದ್ದು ಎಲ್ಲರಿಗೂ ಗೊತ್ತೆ ಇದೆ.
ಇದೀಗ ವಿದೇಶಿ ಪ್ರಜೆಗಳೂ ನಮ್ಮ ದೇಶದ ಸಂಸ್ಕೃತಿಯಂತೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೊತೆಗೆ ಭಾರತದ ಅನೇಕ ಪ್ರತಿಷ್ಟಿತ ವ್ಯಕ್ತಿಗಳೂ ಶೇಕ್ ಹ್ಯಾಂಡ್ಗೆ ಬದಲಾಗಿ ನಮಸ್ತೆ ಹೇಳುತ್ತಿರುವುದು ಕಂಡುಬರುತ್ತಿದೆ. ಅಪ್ಪುಗೆಗೆ ಹೆಸರಾಗಿರುವ ಬಾಲಿವುಡ್ ಸೆಲೆಬ್ರಿಟಿಗಳೂ ನಮಸ್ತೆ ಎನ್ನುತ್ತಿದ್ದಾರೆ.
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರೂ, ಹ್ಯಾಂಡ್ ಶೇಕ್ ಬದಲು ನಮಸ್ತೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಜನರಿಗೆ ಮನವಿಯನ್ನು ಮಾಡಿಕೊಂಡಿದ್ದರು.
ಒಟ್ಟಿನಲ್ಲಿ ಕೊರೊನಾ ಹುಟ್ಟಿಸಿದ ಭಯದಿಂದ, ಭಾರತದ ಸಂಸ್ಕೃತಿ ನಮಸ್ತೆ ಹೆಚ್ಚು ಪ್ರಚಾರ ಪಡೆದಿದೆ ಎಂದರೆ ಅತಿಶಯೋಕ್ತಿಯಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.