ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವಾರು ಕಳವು ಪ್ರಕರಣಗಳ ಆರೋಪಿ ಪಡಗಂಡಿ ಗ್ರಾಮದ ಅಜಿಮಾರು ನಿವಾಸಿ ಹಮೀದ್ ಆಲಿಯಾಸ್ ಲಾಡಿ ಹಮೀದ್ ಆಲಿಯಾಸ್ ಜಾಫರ್ ಹಮೀದ್ ಎಂಬಾತನನ್ನು ವೇಣೂರು ಪೋಲಿಸರು ಪಡಂಗಡಿ ಸಮೀಪದ ಲಾಡಿ ಎಂಬಲ್ಲಿ ಆದಿತ್ಯವಾರ ಬಂಧಿಸಿದ್ದಾರೆ.
ಈತನಿಗೆ ನ್ಯಾಯಾಲಯದ ವಾರಂಟ್ ಇದ್ದರೂ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯಂತೆ ವೇಣೂರು ಪೊಲಿಸ್ ತಂಡ ಪಡಂಗಡಿ ಸಮೀಪದ ಲಾಡಿ ಎಂಬಲ್ಲಿಂದ ಈತನನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದ್ದರು. ಈತನ ಮೇಲೆ ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ, ಪುಂಜಾಲಕಟ್ಟೆ, ಬಂಟ್ವಾಳ, ಪಡುಬಿದ್ರಿ, ಚಿಕ್ಕಮಗಳೂರು ಗ್ರಾಮಾಂತರ, ಬೇಲೂರು, ಬಣಕಲ್ ಪೊಲಿಸ್ ಠಾಣೆಗಳಲ್ಲಿ ಅಂಗಡಿಗಳಿಂದ ಕಳವುಗೈದ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಈತನ ಪತ್ತೆ ಕಾರ್ಯದಲ್ಲಿ ವೇಣೂರಿನ ಪೋಲಿಸ್ ಠಾಣೆಯ ಎಸ್ಐ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಸಿಬಂದಿಗಳಾದ ವೃಷಭ, ಕೃಷ್ಣ ನಾಯ್ಕ, ವಿಜಯ ಕುಮಾರ್, ರೋಹಿತ್ ಸಹಕರಿಸಿದ್ದರು. ಈತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.