ನವದೆಹಲಿ: 2019ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್ಕ್ಯೂ) ಸಮೀಕ್ಷೆಯಲ್ಲಿ, ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಗಾತ್ರ ಮತ್ತು ಪ್ರದೇಶಗಳ ಪ್ರಕಾರ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರತಿ ವರ್ಷ 2-5 ಮಿಲಿಯನ್ ಪ್ರಯಾಣಿಕರು ವಿಭಾಗದಲ್ಲಿ ‘ ಈ ಆಯ್ಕೆಯನ್ನು ಮಾಡಲಾಗಿದೆ.
ಮಂಗಳೂರಿನ ಹೊರತಾಗಿ, ಎಎಐ ನಿರ್ವಹಿಸುತ್ತಿರುವ ಇತರ ಎರಡು ವಿಮಾನ ನಿಲ್ದಾಣಗಳಾದ ಚಂಡೀಗಢ ಮತ್ತು ತಿರುವನಂತಪುರಂ ಕೂಡ ಅದೇ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂತೃಪ್ತಿಯನ್ನು ಅಳೆಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಲಾದ ಜಾಗತಿಕ ಮಾನದಂಡ ಕಾರ್ಯಕ್ರಮವೇ ಎಎಸ್ಕ್ಯೂ ಸಮೀಕ್ಷೆ ಆಗಿದೆ ಎಂದು ಪ್ರಕಟಣೆ ತಿಳಿಸಿದೆ. ಏರ್ ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ಈ ಸಮೀಕ್ಷೆಯನ್ನು ನಡೆಸುತ್ತದೆ, ಇದು ಪ್ರಯಾಣಿಕರ ಅಭಿಪ್ರಾಯದಲ್ಲಿ ಉತ್ತಮ ಗ್ರಾಹಕ ಅನುಭವವನ್ನು ನೀಡುವ ವಿಶ್ವದಾದ್ಯಂತದ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ. ಪ್ರಯಾಣಿಕರ ಅಭಿಪ್ರಾಯವೇ ಇಲ್ಲಿ ಮಾನದಂಡ.
ಪ್ರವೇಶ, ಚೆಕ್-ಇನ್, ಭದ್ರತೆ, ವಿಮಾನ ನಿಲ್ದಾಣ ಸೌಲಭ್ಯಗಳು, ಆಹಾರ ಮತ್ತು ಪಾನೀಯ, ಚಿಲ್ಲರೆ ವ್ಯಾಪಾರ, ವಿಮಾನ ನಿಲ್ದಾಣ ಪರಿಸರ ಮತ್ತು ಆಗಮನ ಸೇವೆಗಳಂತಹ ಎಂಟು ಪ್ರಮುಖ ವಿಭಾಗಗಳನ್ನು ಒಳಗೊಂಡಿರುವ 34 ಪ್ರಮುಖ ಕಾರ್ಯಕ್ಷಮತೆ ಸೂಚಕಗಳಲ್ಲಿ ಪ್ರಯಾಣಿಕರ ಸಂತೃಪ್ತಿಯನ್ನು ಸಮೀಕ್ಷೆಯು ಅಳೆಯುತ್ತದೆ.
2019 ರ ಅವಧಿಯಲ್ಲಿ, ಉತ್ತರ ಅಮೆರಿಕಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್, ಯುರೋಪ್, ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಏಷ್ಯಾದಾದ್ಯಂತದ ಸುಮಾರು 356 ವಿಮಾನ ನಿಲ್ದಾಣಗಳಲ್ಲಿ ಎಸಿಐ-ಎಎಸ್ಕ್ಯೂ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.