ನವದೆಹಲಿ: ವಿಶ್ವದಾದ್ಯಂತದ ಟಾಪ್ 50 ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಮುಂಬಯಿ ಮತ್ತು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳು ಸ್ಥಾನ ಪಡೆದುಕೊಂಡಿವೆ ಸೇರಿವೆ ಎಂದು ವಿಷಯವಾರು ಕ್ಯೂಎಸ್ ವರ್ಲ್ಡ್ ರ್ಯಾಂಕಿಂಗ್ ತಿಳಿಸಿದೆ.
ಐಐಟಿ ಬಾಂಬೆ 44 ನೇ ಸ್ಥಾನದಲ್ಲಿದ್ದರೆ, ಐಐಟಿ ದೆಹಲಿ 47 ನೇ ರ್ಯಾಂಕ್ ಪಡೆದಿದೆ. ಕಳೆದ ವರ್ಷ ಐಐಟಿ ದೆಹಲಿ 61 ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ 53 ನೇ ಸ್ಥಾನದಲ್ಲಿತ್ತು.
“ಇದು ನಮ್ಮ ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳ ಮಹತ್ವದ ಸಾಧನೆಯಾಗಿದೆ, ಈ ಸಾಧನೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ವಾತಾವರಣವನ್ನು ಉತ್ತೇಜಿಸಲು ನಮ್ಮ ಸರ್ಕಾರ ಕೈಗೊಂಡ ನಿರಂತರ ಪ್ರಯತ್ನಗಳ ಫಲ ಇದು” ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಐಐಟಿ ಬಾಂಬೆ ನಿರ್ದೇಶಕ ಸುಭಾಸಿಸ್ ಚೌಧುರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಸದಸ್ಯರು ನಮ್ಮ ಪ್ರಮುಖ ಶಕ್ತಿಯಾಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಮ್ಮನ್ನು ಇನ್ನಷ್ಟು ಮುಂದೆ ಕರೆದೊಯ್ಯುತ್ತಾರೆ ಎಂದು ನನಗೆ ಭರವಸೆ ಇದೆ” ಎಂದಿದ್ದಾರೆ.
“ಕ್ಯಾಂಪಸ್ನಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು, ಬಾಹ್ಯ ಮಧ್ಯಸ್ಥಗಾರರೊಂದಿಗಿನ ನಮ್ಮ ಸಂಪರ್ಕವನ್ನು ಬಲಪಡಿಸಲು ಮತ್ತು ಕಳೆದ ಮೂರು ವರ್ಷಗಳಲ್ಲಿ ಪ್ರಾರಂಭಿಸಲಾದ ಹಲವಾರು ಇತರ ಕ್ರಮಗಳ ಕುರಿತು ನಾವು ಕೈಗೊಂಡ ವಿವಿಧ ಕ್ರಮಗಳ ಫಲಿತಾಂಶ ಇದಾಗಿದೆ” ಎಂದು ಐಐಟಿ ದೆಹಲಿ ನಿರ್ದೇಶಕ ವಿ. ರಾಮ್ಗೋಪಾಲ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷ ಭಾರತದ ಐದು ಸಂಸ್ಥೆಗಳು ಅಗ್ರ 100 ರಲ್ಲಿ ಸ್ಥಾನ ಪಡೆದಿದೆ. 2019 ರಲ್ಲಿ ಕೇವಲ ಮೂರು ಸಂಸ್ಥೆಗಳಾದ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಟಿ ಮದ್ರಾಸ್ ಇದ್ದವು. ಈ ವರ್ಷ ಐಐಟಿ ಖರಗ್ಪುರ 86 ನೇ ಸ್ಥಾನದಲ್ಲಿದೆ, ಐಐಟಿ ಮದ್ರಾಸ್ 88 ಮತ್ತು ಐಐಟಿ ಕಾನ್ಪುರ 96 ನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.