ಶ್ರೀನಗರ: ಹಳೆಯ ಜಮ್ಮುವಿನ ವಾಣಿಜ್ಯ ಕೇಂದ್ರವಾಗಿರುವ ಐತಿಹಾಸಿಕ ಸಿಟಿ ಚೌಕ್ ಅನ್ನು ‘ಭಾರತ್ ಮಾತಾ ಚೌಕ್’ ಎಂದು ಮರುನಾಮಕರಣ ಮಾಡಲಾಗಿದೆ. ಬಿಜೆಪಿ ನೇತೃತ್ವದ ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ)ನ ಸಾಮಾನ್ಯ ಸದನವು ನಿರ್ಣಯವನ್ನು ಅಂಗೀಕರಿಸಿದ ನಂತರ ಹೆಸರು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೌಕ್ನ ಮರುನಾಮಕರಣಕ್ಕೆ ಬಹುತೇಕ ಜನರು ಪ್ರಸಂಶೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಸರುಗಳನ್ನು ಬದಲಿಸುವುದು ಮಾತ್ರವಲ್ಲ ಅಭಿವೃದ್ಧಿ ಮತ್ತು ಸ್ವಚ್ಛತೆಗೂ ಹೆಚ್ಚು ಗಮನಹರಿಸಬೇಕೆಂದು ಜೆಎಂಸಿಯನ್ನು ಒತ್ತಾಯಿಸಿದ್ದಾರೆ.
“ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಿಟಿ ಚೌಕ್ ಅನ್ನು” ಭಾರತ್ ಮಾತಾ ಚೌಕ್ “ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ನಾನು ನಾಲ್ಕು ತಿಂಗಳ ಹಿಂದೆ ಸಾಮಾನ್ಯ ಸದನದಲ್ಲಿ ನಿರ್ಣಯವನ್ನು ಮಂಡಿಸಿದ್ದೆ” ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಜೆಎಂಸಿಯ ಉಪಮೇಯರ್ ಪೂರ್ಣಿಮಾ ಶರ್ಮಾ ಹೇಳಿದ್ದಾರೆ.
ಬಳಿಕ ನಿರ್ಣಯವನ್ನು ಅಂಗೀಕರಿಸಲಾಯಿತು ಮತ್ತು ಅದರ ಪ್ರಕಾರ ಸಿಟಿ ಚೌಕ್ ಅನ್ನು ‘ಭಾರತ್ ಮಾತಾ ಚೌಕ್’ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
“ಈ ಸ್ಥಳವು ಐತಿಹಾಸಿಕ ಘಟನೆಗಳು ಮತ್ತು ಪ್ರಮುಖ ನಿರ್ಧಾರಗಳು ಮತ್ತು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಪ್ರತಿ ವರ್ಷ ಜನರು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಇಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಈ ಚೌಕ್ ಅನ್ನು ಭಾರತ್ ಮಾತಾ ಚೌಕ್ ಎಂದು ಮರುನಾಮಕರಣ ಮಾಡಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿತ್ತು” ಎಂದು ಶರ್ಮಾ ಹೇಳಿದ್ದಾರೆ.
ಮಾತ್ರವಲ್ಲದೇ, ನಗರದ ಪಂಜ್ತೀರ್ಥಿ ಬಳಿಯ ವೃತ್ತಾಕಾರದ ರಸ್ತೆಯ ಪ್ರಾರಂಭದ ಸ್ಥಳವನ್ನು ಜೆಎಂಸಿಯು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ‘ಅಟಲ್ ಚೌಕ್’ ಎಂದು ಹೆಸರಿಸಿದೆ.
13 ವರ್ಷಗಳ ಅಂತರದ ನಂತರ 2018 ರ ಅಕ್ಟೋಬರ್ 8 ರಿಂದ 16 ರವರೆಗೆ ನಾಲ್ಕು ಹಂತಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಮ್ಮುವಿನಲ್ಲಿ ನಡೆದಿತ್ತು. ಇದರ 75 ಜನ ವಾರ್ಡ್ಗಳಲ್ಲಿ 43 ರಲ್ಲಿ ಜಯಗಳಿಸಿದ ಬಿಜೆಪಿಯು ಜೆಎಂಸಿಯಲ್ಲಿ ಅಧಿಕಾರಕ್ಕೇರಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.