ನವದೆಹಲಿ: ಏರೋಸ್ಪೇಸ್ ದಿಗ್ಗಜ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 2027ರ ವೇಳೆಗೆ 10 ರಿಂದ 12-ಟನ್ ಅಟ್ಯಾಕ್ ಹೆಲಿಕಾಪ್ಟರ್ ಅನ್ನು ಉತ್ಪಾದಿಸುವ ನಿಟ್ಟಿನಲ್ಲಿ ಗ್ರೌಂಡ್ವರ್ಕ್ ಅನ್ನು ಪ್ರಾರಂಭಿಸಿದೆ. ಕಾರ್ಯತಾಂತ್ರಿಕವಾಗಿ ಇದು ಭಾರೀ ಮಹತ್ವವನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಈ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಬೋಯಿಂಗ್ನ ಅಪಾಚೆಯಂತಹ ಜಾಗತಿಕವಾಗಿ ಅತ್ಯುತ್ತಮ ಎನಿಸಿಕೊಂಡಿರುವ ಮೀಡಿಯಂ-ಲಿಫ್ಟ್ ಮಿಲಿಟರಿ ಚಾಪರ್ಗಳೊಂದಿಗೆ ಹೋಲಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಎಚ್ಎಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ಮುಂಬರುವ ವರ್ಷಗಳಲ್ಲಿ ಮೂರು ಸೇನಾ ಪಡೆಗಳಿಗೆ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಮಿಲಿಟರಿ ಹೆಲಿಕಾಪ್ಟರ್ಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವುದು ಈ ಮೆಗಾ ಯೋಜನೆಯ ಉದ್ದೇಶವಾಗಿದೆ” ಎಂದಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್ ಅವರು, ”ಹೆಲಿಕಾಪ್ಟರ್ನ ಪ್ರಾಥಮಿಕ ವಿನ್ಯಾಸವನ್ನು ಎಚ್ಎಎಲ್ ಪೂರ್ಣಗೊಳಿಸಿದೆ ಮತ್ತು ಒಂದು ವೇಳೆ ಸರ್ಕಾರವು ಯೋಜನೆಗೆ ಈ ವರ್ಷವೇ ಹಸಿರು ನಿಶಾನೆಯನ್ನು ತೋರಿಸಿದರೆ, 2023 ರ ವೇಳೆಗೆ ಮೊದಲ ಮೂಲಮಾದರಿಯೊಂದಿಗೆ ಕನಿಷ್ಠ 500 ಘಟಕಗಳನ್ನು ಉತ್ಪಾದಿಸುವುದು ನಮ್ಮ ಆರಂಭಿಕ ಗುರಿಯಾಗಿದೆ” ಎಂದಿದ್ದಾರೆ.
“ಮಿ -17 ಫ್ಲೀಟ್ ಅನ್ನು ಬದಲಾಯಿಸುವ ಸಲುವಾಗಿ 10 ರಿಂದ 12 ಟನ್ ವಿಭಾಗದಲ್ಲಿ ಹೆಲಿಕಾಪ್ಟರ್ ಉತ್ಪಾದಿಸುವುದು ನಾವು ಗಮನ ಹರಿಸುತ್ತಿರುವ ಒಂದು ಪ್ರಮುಖ ಯೋಜನೆಯಾಗಿದೆ. ಇದು ಸುಮಾರು 500 ಹೆಲಿಕಾಪ್ಟರ್ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶೀಯ ವೇದಿಕೆಯಾಗಿದೆ. ಇದು ವಿದೇಶಗಳಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಮದುಗಳನ್ನು ಮಾಡುವುದನ್ನು ನಿಲ್ಲಿಸುತ್ತದೆ” ಎಂದಿದ್ದಾರೆ.
ವಿನ್ಯಾಸಕ್ಕಾಗಿ ಮತ್ತು ಹೆಲಿಕಾಪ್ಟರ್ನ ಮೂಲಮಾದರಿಯನ್ನು ತಯಾರಿಸಲು 9,600 ಕೋಟಿ ರೂಪಾಯಿಗಳ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.
“ನಾವು 2020ರಲ್ಲಿ ಈ ಯೋಜನೆಗೆ ಅನುಮೋದನೆ ಪಡೆದರೆ, ನಮಗೆ 2027 ರ ವೇಳೆಗೆ ಮೊದಲ ಚಾಪರ್ ತಯಾರಿಸಲು ಸಾಧ್ಯವಾಗುತ್ತದೆ. ನಾವು ವೇರಿಯೆಂಟ್ ಆಗಿರುವ ಕನಿಷ್ಠ 500 ಹೆಲಿಕಾಪ್ಟರ್ಗಳನ್ನು ಉತ್ಪಾದಿಸುವತ್ತ ನೋಡುತ್ತಿದ್ದೇವೆ. ಇದು ಪ್ರಸ್ತುತ ನಾವು ಕೆಲಸ ಮಾಡುತ್ತಿರುವ ಪ್ರಮುಖ ಯೋಜನೆಯಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.