ಮುಂಬಯಿ: ಭಾರತೀಯರಲ್ಲಿ ಕಬಡ್ಡಿ ಕ್ರೇಝ್ ಹತ್ತಿಸಿದ್ದ ಪ್ರೋ ಕಬಡ್ಡಿ ಲೀಗ್ ಶನಿವಾರದಿಂದ ಮತ್ತೆ ಆರಂಭವಾಗುತ್ತಿದೆ. 2 ನೇ ಆವೃತ್ತಿಯ ಚಾಲನೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಅಮಿತಾಭ್ ಬಚ್ಚನ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದ್ದಾರೆ.
ಮುಂಬಯಿಯ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ಇಂದಿನ ಆರಂಭಿಕ ಪಂದ್ಯ ನಡೆಯಲಿದೆ, ಸೀಸನ್ ಒಂದರ ಚಾಂಪಿಯನ್ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್, ಅತಿಥೇಯ ಯು ಮುಂಬಾ ತಂಡವನ್ನು ಎದುರಿಸಲಿದೆ.
37 ದಿನಗಳ ಕಾಲ ಪ್ರೋ ಕಬಡ್ಡಿ ಪಂದ್ಯಗಳು ನಡೆಯಲಿದ್ದು, 8 ಕೇಂದ್ರಗಳಲ್ಲಿ ಒಟ್ಟು 60 ಪಂದ್ಯಗಳು ಆಯೋಜನೆಗೊಳ್ಳಲಿವೆ. ವಿದೇಶಿ ಆಟಗಾರರು ಕೂಡ ವಿವಿಧ ತಂಡಗಳಲ್ಲಿದ್ದಾರೆ.
ಅಪ್ಪಟ ದೇಶೀಯ ಕ್ರೀಡೆಯಾದ ಕಬಡ್ಡಿ ಪ್ರೋ ಕಬಡ್ಡಿ ಲೀಗ್ನ ಮೂಲಕ ಭಾರೀ ಜನಪ್ರಿಯತೆ ಗಳಿಸಿದೆ. ಕ್ರಿಕೆಟ್ನಷ್ಟೇ ಪ್ರೀತಿಯಿಂದ ಜನರು ಈ ಪಮದ್ಯಗಳನ್ನು ವೀಕ್ಷಿಸುತ್ತಾರೆ. ಅಲ್ಲದೇ ಕ್ರಿಕೆಟ್ ಆರಾಧಕ ದೇಶದಲ್ಲೂ ಕಬಡ್ಡಿಯಂತಹ ದೇಶೀಯ ಆಟ ಮಿಂಚಬಹುದು ಎಂಬುದಕ್ಕೆ ಈ ಲೀಗ್ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.