ಬೀಜಿಂಗ್: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿದ್ದ ಭಾರತೀಯನನ್ನು ರಾಜತಾಂತ್ರಿಕ ಮಾತುಕತೆಯ ಬಳಿಕ ಚೀನಾ ರಿಲೀಸ್ ಮಾಡಿದೆ.
46 ವರ್ಷದ ದೆಹಲಿ ಮೂಲದ ಉದ್ಯಮಿ ರಾಜೀವ್ ಮೋಹನ್ ಕುಲಶ್ರೇಷ್ಠ ಎಂಬುವವರನ್ನು ಇತರ 20 ವಿದೇಶಿ ಪ್ರವಾಸಿಗಳೊಂದಿಗೆ ಚೀನಾ ಬಂಧಿಸಿತ್ತು, ಇವರು ಉಗ್ರರಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದರು ಮತ್ತು ಇವರಿಗೆ ಉಗ್ರರ ಸಂಪರ್ಕವಿದೆ ಎಂದು ಅದು ವಾದಿಸಿತ್ತು.
ಕಳೆದ ಕೆಲವು ದಿನಗಳಿಂದ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಛೇರಿ ಕುಲಶ್ರೇಷ್ಠ ಅವರ ಬಿಡುಗಡೆಗೆ ಭಾರೀ ಕಸರತ್ತುಗಳನ್ನು ನಡೆಸಿತ್ತು, ಅದರ ಫಲವಾಗಿ ನಿನ್ನೆ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರು ದೆಹಲಿಯತ್ತ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕುಲಶ್ರೇಷ್ಠ ಸೇರಿದಂತೆ ಇತರ 20 ವಿದೇಶಿ ಪ್ರವಾಸಿಗರು ಚೀನಾದ ಹೋಟೆಲ್ವೊಂದರ ರೂಮಿನಲ್ಲಿ 13ನೇ ಶತಮಾನದ ಮಂಗೋಲಿಯನ್ ದೊರೆ ಗಿಂಗಿಸ್ ಖಾನ್ಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಚೀನಾ ಅಧಿಕಾರಿಗಳು ಬಂಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.