ನವದೆಹಲಿ: ರೈಲ್ವೇಯಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಫೀಡ್ಬ್ಯಾಕ್ ಸರ್ವಿಸ್ಗಳನ್ನು ಈ ತಿಂಗಳಿನಿಂದ ಆರಂಭಿಸಲಾಗುತ್ತಿದೆ.
ರೈಲ್ವೇ ಆಡಳಿತ ಮತ್ತು ರೈಲ್ವೇ ಬಳಕೆದಾರರ ನಡುವೆ ಒಂದು ಉತ್ತಮ ಸಂಪರ್ಕವನ್ನು ಸಾಧಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಆರಂಭಿಸಲಾಗುತ್ತಿದೆ, ಇಂಟರಾಕ್ಟಿವ್ ವಾಯ್ಸ್ ರಿಸ್ಪಾನ್ಸ್ ಸಿಸ್ಟಮ್( ಐವಿಆರ್ಎಸ್)ನ 139 ನಂಬರ್ನೊಂದಿಗೆ ಈ ಫೀಡ್ಬ್ಯಾಕ್ ಸೇವೆ ಆರಂಭಿಸಲಾಗುತ್ತಿದೆ.
ಈ ವ್ಯವಸ್ಥೆಯ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕ ರೈಲ್ವೇ ನೀಡುತ್ತಿರುವ ಸೌಲಭ್ಯಗಳ ಕುರಿತು ರ್ಯಾಂಡಂ ಆಗಿ ತಮ್ಮ ಫೀಡ್ಬ್ಯಾಕ್ ನೀಡಬಹುದಾಗಿದೆ. ರೈಲ್ವೇ ನಿಲ್ದಾಣದ, ಪ್ಲಾಟ್ಫಾರಂ, ರೈಲಿನ ಶುಚಿತ್ವ, ಆಹಾರದ ಗುಣಮಟ್ಟ, ಎಸಿಯ ಕಾರ್ಯನಿರ್ವಹಣೆ, ರೈಲಿನ ಸಮಯಪ್ರಜ್ಞೆ, ಬೆಡ್ರೋಲ್ಗಳ ಗುಣಮಟ್ಟಗಳ ಬಗ್ಗೆ ಇಲ್ಲಿ ಪ್ರಯಾಣಿಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದು.
ಇಲ್ಲಿ ಉತ್ತಮ, ತೃಪ್ತಿದಾಯಕ ಮತ್ತು ಅತೃಪ್ತಿದಾಯಕ ಅಥವಾ ಕೆಟ್ಟದು ಎಂಬ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ. ಪ್ರಯಾಣಿಕರು ಇದನ್ನು ಪ್ರೆಸ್ ಮಾಡುವ ಮೂಲಕ ತಮ್ಮ ಆಯ್ಕೆಗಳನ್ನು ತಿಳಿಸಬಹುದು. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ಗೆ ಜನರ ಪ್ರತಿಕ್ರಿಯೆಗಳನ್ನು ಪಡೆಯುವ ಜವಾಬ್ದಾರಿಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನವನ್ನು ರೈಲ್ವೆಯಲ್ಲಿ ಯಶಸ್ವಿಯಾಗಿ ಅಳವಡಿಸಲು ಈ ಅಭಿಯಾನ ಪ್ರಯೋಜಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.