ನವದೆಹಲಿ: 2013ರಲ್ಲಿ ಭಾರತೀಯ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಸಿಂಗ್ನ ಶಿರಚ್ಛೇಧ ಮಾಡಿದ್ದ ಉಗ್ರನನ್ನು ಈ ವಾರ ನಡೆದ ಕಾರ್ಯಾಚರಣೆಯ ವೇಳೆ ನಮ್ಮ ಸೇನಾಪಡೆಗಳು ಹತ್ಯೆ ಮಾಡಿವೆ ಎಂದು ತಿಳಿದು ಬಂದಿದೆ.
ಹತ್ಯೆಗೊಳಗಾದ ಉಗ್ರನನ್ನು ಅನ್ವರ್ ಫೈಝ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವನಾಗಿದ್ದ. ಈತನನ್ನು ಜುಲೈ 13ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸೇನಾಪಡೆಗಳು ಹತ್ಯೆ ಮಾಡಿವೆ.
2013ರ ಜನವರಿ 8 ರಂದು ನಮ್ಮ ಯೋಧ ನಾಯ್ಕ್ ಹೇಮರಾಜ್ ಸಿಂಗ್ ಎಂಬುವವರನ್ನು ಶಿರಚ್ಛೇಧ ಮಾಡಲಾಗಿತ್ತು, ಈ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿತ್ತು. ಈ ವಿಡಿಯೋದಿಂದ ಶಿರಚ್ಛೇಧ ಮಾಡಿದ್ದ ಅನ್ವರ್ನ ಮುಖಚಹರೆ ಗೊತ್ತಾಗಿತ್ತು.
ಇದೀಗ ಮತ್ತೆ ಆತ ಇಬ್ಬರು ಉಗ್ರರೊಂದಿಗೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ವೇಳೆ ಬಿಎಸ್ಎಫ್ ಯೋದರು ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಮೂಲಕ ಮೃತ ಯೋಧನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.