ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಜಮ್ಮುಕಾಶ್ಮೀರದ ಮಾಜಿ ಹಣಕಾಸು ಸಚಿವ ಗಿರ್ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮ ವರ್ಷಾಚರಣೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ‘ಸಿದ್ಧಾಂತದ ಆಧಾರದಲ್ಲಿ ದೇಶದ ಪರಂಪರೆಯನ್ನು ಒಡೆಯಲು ಸಾಧ್ಯವಿಲ್ಲ, ರಾಜಕೀಯ ನಾಯಕರಿಂದ ರಾಷ್ಟ್ರೀಯ ಘನತೆಯನ್ನು ವಿಭಾಗಿಸಲು ಸಾಧ್ಯವಿಲ್ಲ. ದೇಶಕ್ಕಾಗಿ ಶ್ರಮಿಸಿದ ಹಿಂದಿನ ಎಲ್ಲಾ ರಾಜಕೀಯ ನಾಯಕರುಗಳು ಗೌರವಕ್ಕೆ ಅರ್ಹರು’ ಎಂದರು.
ದೋಗ್ರಾ ಅವರು ವಿತ್ತಸಚಿವ ಅರುಣ್ ಜೇಟ್ಲಿ ಅವರ ಮಾವ ಕೂಡ ಆಗಿದ್ದು, ರಾಜಕೀಯವಾಗಿ ಇವರಿಬ್ಬರು ಬೇರೆ ಬೇರೆಯಾಗಿಯೇ ಇದ್ದರು, ಅಳಿಯಂದಿರು ಯಾವತ್ತೂ ತಮ್ಮ ಮಾವಂದಿರ ಹೆಸರಿನಿಂದ ಗುರುತಿಸಿಕೊಳ್ಳಬಾರದು ಎಂದರು. ಈ ಮೂಲಕ ಕುಟುಂಬ ರಾಜಕಾರಣವನ್ನು ಕುಟುಕಿದ ಅವರು, ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ದೋಗ್ರಾ ಅವರು ಜಮ್ಮು ಕಾಶ್ಮೀರದ ಧೀಮಂತ ನಾಯಕ, ವಿತ್ತ ಸಚಿವರಾಗಿ ಅವರು 26 ಬಜೆಟ್ಗಳನ್ನು ಮಂಡಿಸಿದ್ದಾರೆ. ಅರುಣ್ ಜೇಟ್ಲಿ ಸೇರಿದಂತೆ ತಮ್ಮ ಕುಟುಂಬದ ಯಾರಿಗೂ ಅವರು ರಾಜಕೀಯವಾಗಿ ಲಾಭ ಮಾಡಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.