ಶ್ರೀನಗರ : ಜಮ್ಮುವಿನಲ್ಲಿ ನಿರ್ಮಾಣಗೊಳ್ಳಲಿರುವ AIIMS ಕಟ್ಟಡಕ್ಕೆ ಫೆ. 13 ರಂದು ‘ಭೂಮಿ ಪೂಜೆ’ ಕಾರ್ಯಕ್ರಮ ನೆರವೇರಿದೆ. ಇದರಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ಏಮ್ಸ್ ಅನ್ನು ಒದಗಿಸಲು ನಿರ್ಧರಿಸಲಾಗಿದೆ. ಒಂದು ಜಮ್ಮು ಮತ್ತು ಇನ್ನೊಂದು ಕಾಶ್ಮೀರದಲ್ಲಿ ತಲೆ ಎತ್ತಲಿದೆ. ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಎರಡು ಏಮ್ಸ್ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಸಹ ಮಂಜೂರು ಮಾಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಜಿತೇಂದ್ರ ಸಿಂಗ್, ”ಮತ ಬ್ಯಾಂಕ್ ರಾಜಕೀಯವನ್ನು ಮೀರಿ ಕೆಲಸ ಮಾಡುವ ಸರ್ಕಾರದ ಹೊಸ ಕೆಲಸದ ಸಂಸ್ಕೃತಿ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ” ಎಂದು ಹೇಳಿದ್ದಾರೆ.
2019 ರ ಜನವರಿಯಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್ಎಸ್ವೈ) ಅಡಿಯಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ನಂತರ ಈ “ಭೂಮಿ ಪೂಜೆ” ಕಾರ್ಯ ನಡೆಯಿತು. ಜಮ್ಮುವಿನಲ್ಲಿ ಏಮ್ಸ್ ಸ್ಥಾಪಿಸುವ ಪ್ರಸ್ತಾಪವನ್ನೂ ಅದೇ ಸಂದರ್ಭದಲ್ಲಿ ಸಂಪುಟದಲ್ಲಿ ಅಂಗೀಕರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಫೆಬ್ರವರಿ 3 ರಂದು ಜಮ್ಮುವಿನ ಏಮ್ಸ್ಗೆ ಅಡಿಪಾಯ ಹಾಕಿದ್ದರು. ಅಂದಾಜು 1661 ಕೋಟಿ ರೂ.ಗಳ ವೆಚ್ಚದೊಂದಿಗೆ ಇದು ನಿರ್ಮಾಣವಾಗಲಿದ್ದು, ಯೋಜನೆಯನ್ನು ಸಿಪಿಡಬ್ಲ್ಯುಡಿ ನಿರ್ವಹಿಸುತ್ತಿದೆ. ಆಗಸ್ಟ್ 2022 ರ ವೇಳೆಗೆ 30 ತಿಂಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಏಮ್ಸ್ ಜಮ್ಮು 750 ಹಾಸಿಗೆಗಳ ಆಸ್ಪತ್ರೆಯಾಗಲಿದ್ದು, ವಿಶೇಷ ವಿಭಾಗಗಳನ್ನು ಹೊಂದಿರಲಿದೆ. ಇದು ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜನ್ನು ಸಹ ಹೊಂದಿರಲಿದೆ. ವರದಿಯ ಪ್ರಕಾರ, ಈ ಏಮ್ಸ್ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡ ಕಟ್ಟಡ ಆಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.