ನವದೆಹಲಿ: ತಲಾ 30-35 ಕೋಟಿ ರೂಪಾಯಿ ವೆಚ್ಚದ ಕಡಿಮೆ ಬೆಲೆಯ ಉಪಗ್ರಹ ಉಡಾವಣಾ ವಾಹಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಘೋಷಿಸಿದೆ. 500 ಕಿಲೋಗ್ರಾಮ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇದು ಸಹಕಾರಿಯಾಗಲಿದೆ.
ರಾಷ್ಟ್ರದ ಪ್ರಧಾನ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ಇಸ್ರೋ ಮುಂದಿನ ನಾಲ್ಕು ತಿಂಗಳಲ್ಲಿ ಇಂತಹ ಮೊದಲ ವಾಹಕದ ಉಡಾವಣೆ ನಡೆಯಲಿದೆ ಎಂದು ಘೋಷಿಸಿದೆ. ಈ ಕಡಿಮೆ ವೆಚ್ಚದ ಉಡಾವಣಾ ವಾಹಕಗಳು 500 ಕಿಲೋಗ್ರಾಂಗಳಷ್ಟು ತೂಕವಿರುವ ಉಪಗ್ರಹಗಳನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಹೇಳಿದೆ.
ಇಸ್ರೋಗೆ ಈ ವಾಹಕದ ಉಡಾವಣೆಯು ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ, ಅದಕ್ಕೆ ವಾಣಿಜ್ಯಿಕವಾಗಿ ಸ್ಪರ್ಧಾತ್ಮಕವಾಗಲು ಇದು ಸಹಾಯಕವಾಗುತ್ತದೆ ಮತ್ತು ಮಾರುಕಟ್ಟೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಭಾಗಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಇಂತಹ ಉಡಾವಣಾ ವಾಹನಗಳನ್ನು ಕೇವಲ ಮೂರು ವಾರಗಳ ಅವಧಿಯಲ್ಲಿ ತಯಾರಿಸುವ ಸಾಮರ್ಥ್ಯವನ್ನು ಇಸ್ರೋ ನಿರ್ಮಿಸಿದೆ ಎಂಬುದು ಮಹತ್ವದ ವಿಷಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.