ನವದೆಹಲಿ: ಗಡಿಯಾಚೆಗಿನ ಫೈಯರಿಂಗ್ ಅಥವಾ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ನಡೆಯಬಹುದಾದಂತಹ ಭಾರೀ ಅನಾಹುತವನ್ನು ತಡೆಗಟ್ಟುವ ಸಲುವಾಗಿ ಭಾರತೀಯ ಸೇನೆಯು ತನ್ನ ಇನ್ಫ್ರಾಂಟ್ರಿ ಅಸಾಲ್ಟ್ ರೈಫಲ್ಸ್ಗೆ 22,000 ನೈಟ್ ವಿಶನ್ ಸಾಧನಗಳನ್ನು ಖರೀದಿ ಮಾಡಲು ಯೋಜನೆ ರೂಪಿಸುತ್ತಿದೆ.
ವರದಿಯ ಪ್ರಕಾರ, ಕಳೆದ ವರ್ಷ ಫೆಬ್ರವರಿ 26 ರಂದು ಬಾಲಕೋಟ್ ವಾಯುದಾಳಿಯ ನಂತರ ನಡೆದ ಭಯೋತ್ಪಾದಕ ದಾಳಿ ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ 82 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಭವಿಷ್ಯದಲ್ಲಿ ಇದೇ ರೀತಿಯ ಪ್ರಾಣ ನಷ್ಟವನ್ನು ಕಡಿಮೆ ಮಾಡಲು, ಭಾರತೀಯ ಸೇನೆಯು ತನ್ನ ಇನ್ಫಾಂಟ್ರಿ ಪಡೆಯ ಅಟ್ಯಾಕ್ ರೈಫಲ್ಗಳಿಗಾಗಿ ನೈಟ್ ವಿಶನ್ ಸಾಧನಗಳನ್ನು ಪೂರೈಸಲು ನಿರ್ಧರಿಸಿದೆ.
ನೈಟ್ ವಿಷನ್ ಸಾಧನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಇದನ್ನು ಗಡಿಯಲ್ಲಿ ನಿಯೋಜಿತರಾದ ಸೈನಿಕರು ಹೆಚ್ಚಾಗಿ ಬಳಸುತ್ತಾರೆ ಎಂದು ವರದಿಗಳು ಹೇಳುತ್ತವೆ
“ಥರ್ಮಲ್ ಇಮೇಜಿಂಗ್ ನೈಟ್ ಸೈಟ್ಸ್ ಸೈನಿಕರಿಗೆ ಕತ್ತಲೆಯಲ್ಲಿ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ದೀರ್ಘಾವಧಿಯ ನಿಖರವಾದ ತೊಡಗಿಸಿಕೊಳ್ಳುವಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ರಾತ್ರಿ ಹೋರಾಟದ ಸಾಮರ್ಥ್ಯವು ಹೆಚ್ಚಾಗುತ್ತದೆ” ಎಂದು ರಕ್ಷಣಾ ಸಚಿವಾಲಯವು ವರದಿಯಲ್ಲಿ ಉಲ್ಲೇಖಿಸಿದೆ.
ವರದಿಯ ಪ್ರಕಾರ, 2019 ರ ನವೆಂಬರ್ನಲ್ಲಿ ಅಟ್ಯಾಕ್ ರೈಫಲ್ಗಳಿಗಾಗಿ ‘ಥರ್ಮಲ್ ಇಮೇಜಿಂಗ್ ನೈಟ್ ಸೈಟ್ಸ್’ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಅನುಮೋದನೆಯ ನಂತರ ಸಾಧನಗಳ ಹುಡುಕಾಟ ಪ್ರಾರಂಭವಾಯಿತು.
ಇದಲ್ಲದೆ, ಟ್ಯಾಂಕ್ ಮತ್ತು ಲೈಟ್ ಮೆಷಿನ್ಗನ್ಗಳಲ್ಲಿ ರಾತ್ರಿ ದೃಷ್ಟಿ ಸಾಮರ್ಥ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸೈನ್ಯವು ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.