ನವದೆಹಲಿ: ಖಾಸಗಿ ಕಂಪೆನಿಗಳಿಗೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಆಲ್ಸ್ಟೋಮ್ ಟ್ರಾನ್ಸ್ಪೋರ್ಟ್, ಬೊಂಬಾರ್ಡಿಯರ್, ಸೀಮೆನ್ಸ್ ಎಜಿ, ಟಾಲ್ಗೊ ಮತ್ತು ಮ್ಯಾಕ್ವಾರಿ ಸೇರಿದಂತೆ 24ಕ್ಕೂ ಹೆಚ್ಚು ಸಂಸ್ಥೆಗಳು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ವರದಿಗಳು ಹೇಳಿವೆ.
ಯೋಜನೆಯಡಿಯಲ್ಲಿ, ಸಿಗ್ನಲಿಂಗ್ ಮತ್ತು ಹಳಿಗಳ ನಿಯಂತ್ರಿಸುವಿಕೆಯನ್ನು ಭಾರತೀಯ ರೈಲ್ವೆಯೇ ನೋಡಿಕೊಳ್ಳಲಿದೆ. ಆಯ್ದ ಖಾಸಗಿ ಪಾಲುದಾರರಿಗೆ 100 ರೈಲು ಮಾರ್ಗಗಳನ್ನು 10-12 ಕ್ಲಸ್ಟರ್ಗಳಾಗಿ ವಿಂಗಡಿಸಿ ಪ್ರಯಾಣಿಕರ ರೈಲುಗಳನ್ನು ಓಡಿಸಲು 35 ವರ್ಷಗಳ ಅವಧಿಯವರೆಗೆ ರಿಯಾಯಿತಿ ನೀಡಲಾಗುತ್ತದೆ.
ದೇಶೀಯ ಪಾಲುದಾರರಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕಾನಮಿಕ್ ಝೋನ್, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪ್ಸ್ (ಐಆರ್ಸಿಟಿಸಿ), ಟಾಟಾ ರಿಯಾಲ್ಟಿ, ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಫಂಡ್ (ಎನ್ಐಐಎಫ್) ಮತ್ತು ಕೆಇಸಿ ಇಂಟರ್ನ್ಯಾಷನಲ್ ಲಿಮಿಟೆಡ್ ಕೂಡ ಪ್ರಯಾಣಿಕ ರೈಲನ್ನು ಓಡಿಸಲು ಆಸಕ್ತಿ ತೋರಿಸಿದ್ದಾರೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳಿಗೆ 100 ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಸರ್ಕಾರದ ಯೋಜನೆಗೆ ಭಾರೀ ಮಟ್ಟದಲ್ಲಿ ಆಸಕ್ತಿ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು, ಮೊದಲ ಖಾಸಗಿ ರೈಲು ಓಡಲಾರಂಭಿಸಲು ಕನಿಷ್ಠ ಎರಡು ವರ್ಷಗಳು ಬೇಕಾಗಬಹುದು ಎಂದು ಹೇಳಿದ್ದಾರೆ. ವಾಯುಯಾನ ಕ್ಷೇತ್ರದಲ್ಲಿ ಏನಾಗುತ್ತದೆ ಎಂಬುದರಂತೆಯೇ ಬೇಡಿಕೆಯ ಮೇರೆಗೆ ರೈಲುಗಳನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಆಲೋಚನೆ ಇದೆ ಎಂದಿದ್ದಾರೆ. ಪ್ರಸ್ತುತ, ರೈಲ್ವೆ ತನ್ನ ನೆಟ್ವರ್ಕ್ನಲ್ಲಿ ಸುಮಾರು 13,000 ಪ್ಯಾಸೆಂಜರ್ ರೈಲುಗಳನ್ನು ಓಡಿಸುತ್ತಿದೆ, ಆದರೆ ಬೇಡಿಕೆಯನ್ನು ಪೂರೈಸಲು ಸುಮಾರು 20,000 ರೈಲುಗಳು ಬೇಕಾಗುತ್ತವೆ ಎಂದು ಯಾದವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.