ನವದೆಹಲಿ: ಇಂಡಿಯಾ ಟುಡೆ-ಕಾರ್ವಿ ನಡೆಸಿದ ‘ಮೂಡ್ ಆಫ್ ದಿ ನೇಷನ್ (ಎಂಒಟಿಎನ್)’ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ನರೇಂದ್ರ ಮೋದಿ ಸರ್ಕಾರದ ಅತ್ಯಂತ ವಿಶ್ವಾಸಾರ್ಹ ಹತ್ತು ಮಂತ್ರಿಗಳ ಪೈಕಿ ಗೃಹ ಸಚಿವ ಅಮಿತ್ ಶಾ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶೇ. 42 ರಷ್ಟು ಜನರು ಗೃಹ ಸಚಿವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಸಚಿವರು ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡನೇ ಸ್ಥಾನದಲ್ಲಿದ್ದು, ಶೇಕಡಾ 39 ರಷ್ಟು ಜನರು ಉನ್ನತ ಕಾರ್ಯನಿರತ ಸಚಿವರಾಗಿ ಅವರನ್ನು ಹೆಸರಿಸಿದ್ದಾರೆ. ನಂತರ ಕ್ರಮವಾಗಿ ನಿತಿನ್ ಗಡ್ಕರಿ (ಶೇ 39), ನಿರ್ಮಲಾ ಸೀತಾರಾಮನ್ (ಶೇ.26 ), ಪಿಯೂಷ್ ಗೋಯಲ್ (24 ಶೇಕಡಾ), ಸ್ಮೃತಿ ಇರಾನಿ (22 ಶೇಕಡಾ), ರವಿಶಂಕರ್ ಪ್ರಸಾದ್ (ಶೇ.16 ), ರಾಮ್ ವಿಲಾಸ್ ಪಾಸ್ವಾನ್ (ಶೇ.15), ಗಿರಿರಾಜ್ ಸಿಂಗ್ (ಶೇ.15) ಮತ್ತು ನರೇಂದ್ರ ಸಿಂಗ್ ತೋಮರ್ (ಶೇ.14) ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೋದಿಯವರ ನೇತೃತ್ವದ ಸರ್ಕಾರ 2019 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಗೃಹ ಸಚಿವ ಅಮಿತ್ ಶಾ ಮುಂಚೂಣಿಯಲ್ಲಿ ನಿಂತಿದ್ದಾರೆ. ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸಿದ ಮತ್ತು ಪೌರತ್ವ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳ ಮೂಲಕ ಅಂಗೀಕರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮೇಲ್ಮನೆಯಲ್ಲಿ ಬಿಜೆಪಿಗೆ ಸಾಕಷ್ಟು ಸಂಖ್ಯೆಯಿಲ್ಲದಿದ್ದರೂ ಮಸೂದೆಗಳನ್ನು ಅವರು ಅಂಗೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
19 ರಾಜ್ಯಗಳ 194 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 97 ಸಂಸದೀಯ ಕ್ಷೇತ್ರಗಳಲ್ಲಿ ಒಟ್ಟು 12,141 ಜನರನ್ನು ಸಮೀಕ್ಷೆಗೊಳಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.