
ನವದೆಹಲಿ: ದೆಹಲಿಯ ಶಹೀನ್ ಬಾಗ್ನಲ್ಲಿ ಪ್ರತಿಭಟನೆ ಈಗಲೂ ಮುಂದುವರೆದಿದೆ ಮತ್ತು ಪೌರತ್ವ ಕಾಯ್ದೆಯ ವಿರುದ್ಧ ಕಳೆದ ತಿಂಗಳುಗಳಲ್ಲಿ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಈ ನಡುವೆಯೂ ಪಾಕಿಸ್ಥಾನದ ಹಿಂದೂ ಮತ್ತು ಸಿಖ್ಖರ ದುಃಸ್ಥಿತಿಯನ್ನು ಅನಾವರಣ ಮಾಡುವ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
“ನಾವು ಪಾಕಿಸ್ಥಾನಿಗಳು, ನಮ್ಮ ಹಕ್ಕುಗಳು, ನಮ್ಮ ಗೌರವ ಮತ್ತು ನಮ್ಮ ಘನತೆಯನ್ನು ಪಾಕಿಸ್ಥಾನ ಬೆಂಬಲಿಸಬೇಕು” ಎಂದು ಪಾಕಿಸ್ಥಾನಿ ಹಿಂದೂವೊಬ್ಬರು ಹೃದಯಸ್ಪರ್ಶಿಯಾಗಿ ಮಾತನಾಡುವ ಮೂಲಕ ಈ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ವಿಡಿಯೋ ಇಯು ಸಂಸತ್ತಿನ ವರದಿಯಲ್ಲಿನ ‘ಮೂರು ಹಿಂದೂ / ಸಿಖ್ ಹುಡುಗಿಯರನ್ನು ಪ್ರತಿದಿನ ಪಾಕಿಸ್ಥಾನದಲ್ಲಿ ಅಪಹರಿಸಿ, ಅತ್ಯಾಚಾರ ಮಾಡಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ ‘ ಎಂಬುದನ್ನು ಉಲ್ಲೇಖಿಸುತ್ತದೆ.
ಪಾಕಿಸ್ಥಾನದ ಅಲ್ಪಸಂಖ್ಯಾತರ ನೋವು ಮತ್ತು ದುಃಸ್ಥಿತಿಯನ್ನು ಸೆರೆಹಿಡಿಯುವ ಈ ವಿಡಿಯೋವನ್ನು ಡಾ. ಒಮೇಂದ್ರ ರತ್ನ ಅವರು ಮಾಡಿದ್ದಾರೆ. ಇದರಲ್ಲಿ ಇವರುಗಳ ಸಮಸ್ಯೆಗಳಿಗೆ ಸಮರ್ಪಿತವಾದ ಹಾಡು ಕೂಡ ಇದೆ.
ಕೇವಲ ಹದಿನೈದು ದಿನಗಳ ಹಿಂದೆ, ಪಾಕಿಸ್ಥಾನದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿ ಮತಾಂತರ ಮಾಡಲಾಗಿತ್ತು. ಭಾರತೀಯ ವಿದೇಶಾಂಗ ಸಚಿವಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನವದೆಹಲಿಯ ಪಾಕಿಸ್ಥಾನ ಹೈಕಮಿಷನ್ನ ಹಿರಿಯ ಅಧಿಕಾರಿಗೆ ಸಮನ್ಸ್ ನೀಡಿ, ಘಟನೆಯನ್ನು ಖಂಡಿಸಿತ್ತು.
ಪಾಕಿಸ್ಥಾನದಲ್ಲಿ ತಾವು ಅನುಭವಿಸುತ್ತಿರುವ ನರಕಯಾತನೆಯನ್ನು ಈ ವಿಡಿಯೋದಲ್ಲಿ ಅನೇಕ ಪಾಕಿಸ್ಥಾನಿ ಹಿಂದೂಗಳು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ ವಿಡಿಯೋ ಮೂಲಕ ಡಾ. ರತ್ನ ಅವರು ಗಂಭೀರ ವಿಷಯವೊಂದನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
Watch this video and weep for your daughters that we chose to look the other way and did nothing to save them.
The Hindus protesting against CAA do so on the corpses of these Hindu/Sikh girls. https://t.co/12L0nfytTP Full video link #CAA_NRC_support pic.twitter.com/keIA3L7oqf— Dr Omendra Ratnu : Nimittekam (@satyanveshan) January 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


