ಲಕ್ನೋ: ತಾನು ಸತ್ತಿಲ್ಲ, ಇನ್ನೂ ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಉತ್ತರಪ್ರದೇಶ ರಾಮಜನಮ್ ಮೌರಿಯಾ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಜಂಗಢ ಮ್ಯಾಜಿಸ್ಟ್ರೇಟ್ ಕಛೇರಿಗೆ ಓಡಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅವರ ಅಸ್ತಿತ್ವವನ್ನು ಅಧಿಕಾರಿಗಳು ಒಪ್ಪಿಕೊಂಡಿಲ್ಲ.
ಅವರ ಭೂಮಿಯನ್ನು ಲಪಟಾಯಿಸುವುದಕ್ಕಾಗಿ ರಾಮ್ಜನಮ್ ಸತ್ತಿದ್ದಾರೆ ಎಂದು ಅವರ ಸ್ವಂತ ತಮ್ಮನೇ ಅಧಿಕಾರಿಗಳಿಗೆ ಲಂಚಕೊಟ್ಟು ಡೆತ್ ಸರ್ಟಿಫಿಕೇಟ್ ಮಾಡಿಸಿಕೊಂಡಿದ್ದಾರೆ. ಇದೀಗ ರಾಮಜನಮ್ ಅವರಿಗೆ ಅಸ್ತಿತ್ವವೇ ಇಲ್ಲದಂತಾಗಿದೆ.
ಇದು ಕೇವಲ ರಾಮ್ಜನಮ್ ಒಬ್ಬರ ಪರಿಸ್ಥಿತಿಯಲ್ಲ, ಉತ್ತರಪ್ರದೇಶದಲ್ಲಿ ಅವರಂತಹ ನೂರಾರು ಮಂದಿ ಬದುಕಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಸತ್ತಿದ್ದಾರೆ. ಹತ್ತಿರದ ಬಂಧುಗಳೇ ಆಸ್ತಿ ಹೊಡೆಯುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ.
ಇಂತಹ ಪ್ರಕರಣಗಳ ಸಂತ್ರಸ್ಥರಿಗೆ ಸಹಾಯ ಮಾಡಲೆಂದೇ ಲಾಲ್ ಬಿಹಾರಿ ಎಂಬುವವರು ‘ಮೃತಕ್ ಸಿಂಗ್’ ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ. ದಾಖಲೆಗಳಲ್ಲಿ ಸತ್ತು ಜೀವಂತವಾಗಿರುವವರ ಸಂಘ ಇದಾಗಿದೆ. ರಾಮ್ಜನುಮ್ ಅವರಂತವರ ಪರವಾಗಿ ಹೋರಾಡಿ, ಕಾನೂನು ಹೋರಾಟ ಮಾಡಿ ವಂಚಕ ಬಂಧುಗಳಿಗೆ ಮತ್ತು ಲಂಚ ಬಾಕ ಅಧಿಕಾರಿಗಳಿಗೆ ಶಿಕ್ಷೆ ದೊರಕುವಂತೆ ಮಾಡುವುದು ಈ ಸಂಘದ ಗುರಿ. ಈಗಾಗಲೇ ಈ ಸಂಘಟನೆ ಹಲವಾರು ಮಂದಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.
ಕೇವಲ ಉತ್ತರಪ್ರದೇಶ ಮಾತ್ರವಲ್ಲ ಇಡೀ ದೇಶದಲ್ಲಿ ಬದುಕಿದ್ದವರ ಹೆಸರಲ್ಲಿ ಡೆತ್ ಸರ್ಟಿಫಿಕೇಟ್ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಇಂತಹ ಹಲವಾರು ಪ್ರಕರಣಗಳು ನಡೆದಿವೆ. ಲಂಚಗುಳಿತನದಿಂದಾಗಿ, ಆಸ್ತಿಯ ದುರಾಸೆಯಿಂದಾಗಿ ಇಂತಹ ಕಾರ್ಯಗಳನ್ನು ಜನರು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.