
ತಿರುವನಂತಪುರಂ: 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದ ಹಲವಾರು ಮಸೀದಿಗಳು ತ್ರಿವರ್ಣಧ್ವಜವನ್ನು ಹಾರಿಸಿವೆ. ಮಸೀದಿಯನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಅಲಂಕರಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ರಾಜ್ಯದ ಎಲ್ಲಾ ಮಸೀದಿಗಳು ರಾಷ್ಟ್ರಧ್ವಜವನ್ನು ಹಾರಿಸಬೇಕು ಮತ್ತು ಗಣರಾಜ್ಯೋತ್ಸವದಂದು ಭಾರತೀಯ ಸಂವಿಧಾನದ ಮುನ್ನುಡಿಯನ್ನು ಓದಬೇಕು ಎಂದು ರಾಜ್ಯ ವಕ್ಫ್ ಮಂಡಳಿಯ ಆಜ್ಞೆಯನ್ನು ಹೊರಡಿಸಿತ್ತು, ಅದರಂತೆ ರಾಷ್ಟ್ರಧ್ವಜವನ್ನು ಮಸೀದಿಗಳು ಹಾರಿಸಿವೆ ಎಂದು ಮೂಲಗಳು ತಿಳಿಸಿವೆ.
ಮಂಡಳಿಯು ಎಲ್ಲಾ ಮಹಲ್ ಸಮಿತಿಗಳಿಗೆ ಮತ್ತು ಸಂಬಂಧಪಟ್ಟ ಇತರರಿಗೆ ರಾಷ್ಟ್ರೀಯ ಧ್ವಜವನ್ನು ಹಾರಿಸುವಂತೆ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಸುತ್ತೋಲೆಗಳನ್ನು ಹೊರಡಿಸಿತ್ತು. ಅಲ್ಲದೇ, ಇದರ ನಕಲು ಪ್ರತಿಯನ್ನು ಕೂಡ ಸುತ್ತೋಲೆಯ ಪ್ರತಿಯ ಜೊತೆಗೆ ಕಳುಹಿಸಿಕೊಡಲಾಗಿದೆ.
ಕುಟ್ಟಿಯಾಡಿ ಜುಮಾ ಮಸೀದಿ ಸಮಿತಿಯ ಕಾರ್ಯದರ್ಶಿ ಕೆ. ಬಶೀರ್ ಅವರು, ರಾಜ್ಯಾದ್ಯಂತ 10,000 ಮಸೀದಿಗಳು ರಾಷ್ಟ್ರ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವವನ್ನು ಆಚರಿಸಿದೆವು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


