
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಯೋಜಿತ ಬಾಹ್ಯಾಕಾಶ ನಿಲ್ದಾಣ ಯೋಜನೆಗೆ ಸಹಕಾರವನ್ನು ನೀಡಲು ಫ್ರೆಂಚ್ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಸೆಂಟರ್ ಫಾರ್ ಸ್ಪೇಸ್ ಸ್ಟಡೀಸ್ (ಸಿಎನ್ಇಎಸ್) ಮುಂದಾಗಿದೆ.
ಇಸ್ರೋ ಇದೀಗ ತನ್ನ ಮೊದಲ ಮಾನವ ಬಾಹ್ಯಾಕಾಶ ಯಾನ ಗಗನಯಾನ ಯೋಜನೆಗಾಗಿ ಕೆಲಸ ಮಾಡುತ್ತಿದೆ ಮತ್ತು ಭಾರತೀಯ ವಾಯುಸೇನೆಯ ಪೈಲಟ್ಗಳು ಈಗಾಗಲೇ 11 ತಿಂಗಳ ಸುದೀರ್ಘ ಗಗನಯಾತ್ರಿ ತರಬೇತಿ ಕಾರ್ಯಕ್ರಮಕ್ಕಾಗಿ ರಷ್ಯಾಕ್ಕೆ ತೆರಳಿದ್ದಾರೆ.
ಸಿಎನ್ಇಎಸ್ನ ಅಧ್ಯಕ್ಷ ಜೀನ್-ಯ್ವೆಸ್ ಲೆ ಗಾಲ್ ಅವರ ಪರವಾಗಿ ಮಾತನಾಡಿದ ಸಿಎನ್ಇಎಸ್ ಅಧಿಕಾರಿಯೊಬ್ಬರು, “ಫ್ರೆಂಚ್ ಮತ್ತು ಯುರೋಪಿಯನ್ ಪಾಲುದಾರರು ಅಭಿವೃದ್ಧಿ ಮತ್ತು ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಸಂಪಾದಿಸಿದ ಕೌಶಲ್ಯಗಳನ್ನು ಮತ್ತು ದೀರ್ಘಾವಧಿಗೆ ಮೀಸಲಾದ ಮೂಲಸೌಕರ್ಯವನ್ನು ಐಎಸ್ಎಸ್ (ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್) ನಲ್ಲಿ ಯುರೋಪಿಯನ್ ಗಗನಯಾತ್ರಿಗಳ ಆರು ತಿಂಗಳ ಫ್ಲೈಟ್ಗಾಗಿ ಬಳಸಿಕೊಳ್ಳಬಹುದು” ಎಂದಿದ್ದಾರೆ.
ಗಗನಯಾನ ಕಾರ್ಯಾಚರಣೆಗಳಿಗೆ ಬೆಂಬಲವನ್ನು ಪುನರುಚ್ಚರಿಸಿದ ಗಾಲ್ ಅವರು, “ಭಾರತದ ಯೋಜಿತ ಬಾಹ್ಯಾಕಾಶ ಕೇಂದ್ರದ ಅಭಿವೃದ್ಧಿಯು ಭವಿಷ್ಯದ ಸಹಯೋಗದ ಮೊದಲ ಹೆಜ್ಜೆ” ಎಂದು ಬಣ್ಣಿಸಿದರು.
ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟ ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಇಸ್ರೋಗೆ ತನ್ನ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಲು ಸಿಎನ್ಇಎಸ್ ಯೋಜಿಸಿದೆ. ಭವಿಷ್ಯದಲ್ಲಿ ಭಾರತೀಯ ಗಗನಯಾತ್ರಿಗಳಿಗೆ ಫ್ರೆಂಚ್ ತಜ್ಞರು ತರಬೇತಿ ನೀಡುವ ಸಾಧ್ಯತೆ ಇರುವ ಎರಡು ಬಾಹ್ಯಾಕಾಶ ಏಜೆನ್ಸಿಗಳ ನಡುವಿನ ಒಪ್ಪಂದವನ್ನು ಸಿಎನ್ಇಎಸ್ ಮತ್ತು ಇಸ್ರೋ ತಂಡಗಳು ಅಂತಿಮಗೊಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


