ಚೆನ್ನೈ: ದನದ ಹೃದಯದಿಂದ ತಯಾರಿಸಲಾದ ಹೃದಯದ ಕವಾಟವನ್ನು 81 ರ ವೃದ್ಧೆಯೊಬ್ಬಳಿಗೆ ಅಳವಡಿಸಿ ಆಕೆಯ ಜೀವವನ್ನು ಉಳಿಸಿದ ಅಪರೂಪದ ವೈದ್ಯಕೀಯ ಅಚ್ಚರಿಯ ಘಟನೆಯೊಂದು ಚೆನ್ನೈನ ಫ್ರಾಂಟಿಯರ್ ಲೈಫ್ಲೈನ್ ಆಸ್ಪತ್ರೆಯಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ರೋಗಿ ತೀವ್ರ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು, ಈ ಹಿಂದೆಯೂ ಅವರು ಹೃದಯ ಕವಾಟ ಮರುಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಆದರೆ 2015ರ ಆರಂಭದಿಂದ ಅವರಿಗೆ ಮತ್ತೆ ಹೃದಯ ನೋವು ಕಾಣಿಸಿಕೊಂಡು ಪರಿಸ್ಥಿತಿ ಗಂಭೀರತೆಗೆ ತಿರುಗಿತ್ತು. ಅವರಿಗೆ ಅಳವಡಿಸಿದ್ದ ಕವಾಟ ಕಿರಿದಾಗುತ್ತಾ ಬಂದಿತ್ತು.
ಇವರು ಈ ಹಿಂದೆ ಬ್ರೆಸ್ಟ್ ಕ್ಯಾನ್ಸರ್ ಚಿಕಿತ್ಸೆಗೂ ಒಳಪಟ್ಟ ಹಿನ್ನಲೆಯಲ್ಲಿ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದು ಅತೀವ ಕ್ಲಿಷ್ಟಕರವಾಗಿತ್ತು, ಆದರೂ ಛಲ ಬಿಡದ ವೈದ್ಯರು ದನದ ಹೃದಯವನ್ನು ಬಳಸಿಕೊಂಡು ಬಯೋ ಪ್ರಾಸ್ತೆಟಿಕ್ ಕವಾಟವನ್ನು ರಚಿಸಿ ಅದನ್ನು ಕ್ಯಾಥೆಟರ್ ಮೂಲಕ ದೊಡ್ಡ ಆರ್ಟೆರಿ ಮಾರ್ಗವಾಗಿ ಜೋಡಿಸಿ ಮಹಿಳೆಯನ್ನು ಬದುಕಿಸಿದ್ದಾರೆ.
ಡಾ.ಕೆ.ಎಂ.ಚೆರಿಯನ್ ಮತ್ತು ಡಾ. ಅನಂತರಾಮನ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ 3 ಗಂಟೆಗಳ ಕಾಲ ಸರ್ಜರಿ ನಡೆದಿದೆ. ಇದೀಗ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.