ಮುಂಬಯಿ: 71ನೇ ಗಣರಾಜ್ಯೋತ್ಸವದ ಅಂಗವಾಗಿ ಐಐಟಿ ಬಾಂಬೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು ಬೃಹತ್ ತಿರಂಗಾ ಮಾರ್ಚ್ ಅನ್ನು ನಡೆಸಿದ್ದಾರೆ. ಈ ವೇಳೆ ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿದ್ದಾರೆ.
ವರದಿಗಳ ಪ್ರಕಾರ ಸುಮಾರು 1,500 ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಅವರುಗಳ ಕುಟುಂಬ ಸದಸ್ಯರುಗಳು ಈ ತಿರಂಗ ಮಾರ್ಚ್ನಲ್ಲಿ ‘ರಾಷ್ಟ್ರ ನಿರ್ಮಾಣಕ್ಕಾಗಿ ಐಐಟಿ ಬಾಂಬೆ’ ಎಂಬ ಥೀಮ್ನೊಂದಿಗೆ ಈ ಪಥಸಂಚಲನ ಅನ್ನು ನಡೆಸಲಾಗಿದೆ.
ವಿದ್ಯಾರ್ಥಿಗಳು, ನಿವಾಸಿಗಳು ಮತ್ತು ಸಿಬ್ಬಂದಿಗಳು ವಂದೇಮಾತರಂ ಎಂಬ ಉದ್ಘೋಷಗಳನ್ನು ಹಾಕಿದರು. ಭಾರಿ ಪ್ರಮಾಣದಲ್ಲಿ ಎಲ್ಲರೂ ಪಾಲ್ಗೊಂಡಿದ್ದಕ್ಕಾಗಿ ಐಐಟಿ ಬಾಂಬೆ ಪ್ರೊಫೆಸರ್ ಆಶಿಶ್ ಪಾಂಡೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಐಐಟಿ ಬಾಂಬೆಯು ತನ್ನ ಸಂಶೋಧನಾ ಪಾಂಡಿತ್ಯಕ್ಕಾಗಿ ಹೆಸರು ಮಾಡಿದೆಯೇ ಹೊರತು ರಾಜಕೀಯಕ್ಕಾಗಿ ಅಲ್ಲ ಎಂದು ಪ್ರೊಫೆಸರ್ ಅಶಿತೋಷ್ ಕುಮಾರ್ ಹೇಳಿದ್ದಾರೆ. “ರಾಜಕೀಯ ನಮ್ಮ ಸಂಶೋಧನೆಗಳನ್ನು ಹಾಳುಮಾಡುತ್ತದೆ. ನಮ್ಮ ಗಣರಾಜ್ಯೋತ್ಸವನ್ನು ಆಚರಿಸುವುದು ಅತ್ಯಂತ ಮುಖ್ಯ ಮತ್ತು ಅದಕ್ಕಾಗಿ ನಾವು ಇಂದು ಇಲ್ಲಿದ್ದೇವೆ” ಎಂದಿದ್ದಾರೆ.
ಸಾವಿರ ಅಡಿ ಉದ್ದದ ತಿರಂಗ ಮಾರ್ಚ್ ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.