ನವದೆಹಲಿ: ಭಾರತದ ವೈವಿಧ್ಯಪೂರ್ಣ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಡೂಡಲ್ ಅನ್ನು ವಿನ್ಯಾಸಗೊಳಿಸುವ ಮೂಲಕ ಗೂಗಲ್ 71ನೇ ಗಣರಾಜ್ಯೋತ್ಸವವನ್ನು ಆಚರಿಸಿದೆ.
ವಿಶ್ವವಿಖ್ಯಾತ ತಾಜ್ಮಹಲ್ ಮತ್ತು ಇಂಡಿಯಾ ಗೇಟ್ನಂತಹ ಸ್ಥಳ, ರಾಷ್ಟ್ರೀಯ ಪಕ್ಷಿ ನವಿಲಿನಿಂದ ಹಿಡಿದು ಸಾಂಸ್ಕೃತಿಕ ಕಲೆ, ದಿರಿಸು, ನೃತ್ಯ ಮುಂತಾದವುಗಳನ್ನು ಡೂಡಲ್ನಲ್ಲಿ ವಿನ್ಯಾಸಗೊಳಿಸಲಾಗಿದೆ. ಸಿಂಗಾಪುರ ಮೂಲದ ಕಲಾವಿದ ಮೇರು ಸೇತ್ ಅವರು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡೂಡಲ್ ಅನ್ನು ವಿನ್ಯಾಸ ಪಡಿಸಿದ್ದಾರೆ.
ಭಾರತವು ಸಂವಿಧಾನವನ್ನು ಅನುಷ್ಠಾನಗೊಳಿಸಿ ಸ್ವತಂತ್ರ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದ ದಿನವನ್ನು ಗಣರಾಜ್ಯೋತ್ಸವ ಆಗಿ ಆಚರಿಸಲಾಗುತ್ತದೆ. ಈ ವರ್ಷ ದೇಶವು 71ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.
ಕಳೆದ ವರ್ಷ ಡೂಡಲ್ ರಾಷ್ಟ್ರಪತಿ ಭವನದ ವಿನ್ಯಾಸವನ್ನು ರೂಪಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.