ಇಸ್ಲಾಮಾಬಾದ್: ಗಡಿಭಾಗದಲ್ಲಿ ದ್ರೋನ್ ಕ್ಯಾಮೆರಾಗಳನ್ನು ಅಳವಡಿಸಿ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನ ಇದೀಗ ಎಲ್ಲಾ ಆರೋಪಗಳನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಅಳವಡಿಸಿದ್ದ ದ್ರೋನ್ ಕ್ಯಾಮೆರಾವೊಂದನ್ನು ನಮ್ಮ ಸೇನಾಪಡೆಗಳು ಹೊಡೆದುರಳಿಸಿವೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಗಡಿಯ ಏರಿಯಲ್ ಫೋಟೋಗ್ರಫಿ ಮಾಡಲು ಭಾರತ ಇದನ್ನು ಬಳಸಿದೆ ಎಂದು ಆರೋಪಿಸಿ ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈಕಮಿಷನರ್ ಬಳಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಸಮನ್ಸ್ ಜಾರಿಗೊಳಿಸಿದೆ.
ಆದರೆ ಪಾಕಿಸ್ಥಾನದ ಆರೋಪವನ್ನು ಭಾರತ ಸಾರಾಸಗಟಾಗಿ ತಳ್ಳಿ ಹಾಕಿದೆ. ಪಾಕ್ ಸೇನೆ ಧ್ವಂಸ ಮಾಡಿರುವ ದ್ರೋನ್ ಕ್ಯಾಮೆರಾ ಚೀನಾ ತಯಾರಿಸಿದ್ದಾಗಿದೆ. ಭಾರತ ಯಾವತ್ತೂ ಚೀನಾದಿಂದ ದ್ರೋನ್ ಕ್ಯಾಮೆರಾಗಳನ್ನು ಖರೀದಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಮೂಲಗಳ ಪ್ರಕಾರ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಹೈವೇ ಕಣ್ಗಾವಲಿಗಾಗಿ ಈ ದ್ರೋನ್ ಕ್ಯಾಮೆರಾಗಳನ್ನು ಬಳಸಿದ್ದರು ಎನ್ನಲಾಗಿದೆ. ಇದೀಗ ಅದನ್ನು ಧ್ವಂಸ ಮಾಡಿರುವ ಪಾಕ್ ಪಡೆ ಈ ದ್ರೋನ್ ಕ್ಯಾಮೆರಾ ಭಾರತದ್ದು ಎಂದು ಸುಳ್ಳು ಆಪಾದನೆ ಮಾಡುತ್ತಿದೆ.
ಪಾಕಿಸ್ಥಾನದ ಈ ಆರೋಪಕ್ಕೆ ರಾಜತಾಂತ್ರಿಕ ನೆಲೆಯಲ್ಲಿಯೇ ಉತ್ತರ ನೀಡುವುದಾಗಿ ಭಾರತ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.