ವಾರಣಾಸಿ: ಭಾರತದ ಆಧ್ಯಾತ್ಮಿಕ ರಾಜಧಾನಿಯಾಗಿ ಪರಿಗಣಿಸಲ್ಪಟ್ಟಿರುವ ಐತಿಹಾಸಿಕ ನಗರವಾದ ವಾರಣಾಸಿಯು ದಿನನಿತ್ಯ ಸಾವಿರಾರು ಮಂದಿ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವ ಮತ್ತು ಅಂತ್ಯಕ್ರಿಯೆ ವಿಧಿಗಳನ್ನು ಮಾಡುವ ಯಾತ್ರಿಕರ ಸಂಖ್ಯೆ ಇಲ್ಲಿ ಅಪಾರವಾಗಿದೆ.
ಅಲ್ಲಿನ ಕಿರಿದಾದ ಬೀದಿಗಳಲ್ಲಿ ಕಾಶಿ ವಿಶ್ವನಾಥ ಸೇರಿದಂತೆ ಸುಮಾರು 2,000 ದೇವಾಲಯಗಳಿವೆ, ಈ ದೇವಾಲಯ ಶಿವನಿಗೆ ಸಮರ್ಪಿತವಾಗಿದ್ದು ಹಿಂದೂಗಳ ಪರಮ ಪೂಜನೀಯ ಸ್ಥಳವಾಗಿದೆ.
ಆದರೆ ಈ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರ ಭೇಟಿಯು ಹೆಚ್ಚಿನ ಪ್ರಮಾಣದ ಕೊಳಚೆ ಉತ್ಪಾದನೆಗೆ ಕಾರಣವಾಗುತ್ತಿದೆ, ಆದರೆ ಈಗಿರುವ ಅಲ್ಲಿನ ಸಂಸ್ಕರಣಾ ಘಟಕಕ್ಕೆ ಇಷ್ಟೊಂದು ಕೊಳಚೆಯನ್ನು ಸಂಸ್ಕರಿಸಲು ಸಾಧ್ಯವಾಗುತ್ತಿಲ್ಲ.
ವಾರಣಾಸಿ ದಿನಕ್ಕೆ ಸುಮಾರು 300 ಮಿಲಿಯನ್ ಲೀಟರ್ ಕೊಳಚೆ ನೀರನ್ನು ಉತ್ಪಾದಿಸುತ್ತದೆ. ನಮಾಮಿ ಗಂಗೆ ಕಾರ್ಯಕ್ರಮದಡಿ, ಸ್ವಚ್ಛ ಗಂಗೆಗಾಗಿನ ರಾಷ್ಟ್ರೀಯ ಮಿಷನ್ ಅಡಿ ಒಳಚರಂಡಿ ಸಂಸ್ಕರಣೆಗಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನದಿಗೆ ಹರಿಯುವ ಪ್ರಮುಖ ಚರಂಡಿಗಳನ್ನು ಟ್ಯಾಪ್ ಮಾಡಲು ಮತ್ತು ಅವುಗಳನ್ನು ಒಳಚರಂಡಿ ಸಂಸ್ಕರಣಾ ಘಟಕಗಳಿಗೆ (ಎಸ್ಟಿಪಿ) ತಿರುಗಿಸಲು ಕೆಲಸ ಭರದಿಂದ ಸಾಗಿದೆ.
ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಮಹಾನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಮಾತನಾಡಿ, “ದಿನಾಪುರದಲ್ಲಿ ನಾವು ವಿಸ್ತರಿಸಿದ 140 ಎಂಎಲ್ಡಿ ತ್ಯಾಜ್ಯ ಸಂಸ್ಕರಣಾ ಘಟಕ, ಗೋಯಿಥಾಹಾದಲ್ಲಿನ 120 ಎಂಎಲ್ಡಿ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಯಾಗಿದೆ. ಇದರಿಂದಾಗಿ ನಾವು 260 ಎಂಎಲ್ಡಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ವೃದ್ಧಿಸಿದ್ದೇವೆ. 50 ಎಂಎಲ್ಡಿಯ ತ್ಯಾಜ್ಯ ಸಂಸ್ಕರಣೆಯ ಮತ್ತೊಂದು ಸ್ಥಾವರ ರಮಾನಾದಲ್ಲಿ ನಿರ್ಮಾಣ ಹಂತದಲ್ಲಿದೆ, ಅದು ಮಾರ್ಚ್ ವೇಳೆಗೆ ಪೂರ್ಣಗೊಳ್ಳುತ್ತದೆ. ಅವೆಲ್ಲವೂ ಕಾರ್ಯಾರಂಭ ಮಾಡಿದ ನಂತರ, ನಾವು ಹಳೆಯ ಮತ್ತು ಹೊಸದನ್ನು ಒಟ್ಟುಗೂಡಿಸಿದರೆ 400 ಎಂಎಲ್ಡಿ ಸಾಮರ್ಥ್ಯವನ್ನು ನಾವು ಮೀರುತ್ತೇವೆ ” ಎಂದಿದ್ದಾರೆ.
ದಿನಾಪುರದಲ್ಲಿ 140 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ಉದ್ಘಾಟನೆಯೊಂದಿಗೆ ವಾರಣಾಸಿಯಲ್ಲಿ ಅಸ್ತಿತ್ವದಲ್ಲಿರುವ ಕೊಳಚೆ ನೀರಿನ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. 235.53 ಕೋಟಿ ರೂ.ಮೊತ್ತದ ಯೋಜನೆ ಇದಾಗಿದೆ.
ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಜಾರಿಗೆ ತರಲಾದ ಮೊದಲ ಮತ್ತು ಅತಿ ದೊಡ್ಡ ಕೊಳಚೆನೀರಿನ ಸಂಸ್ಕರಣಾ ಯೋಜನೆಯಾಗಿದೆ. ಈ ಯೋಜನೆಯಿಂದಾಗಿ ವಾರಣಾಸಿಯ ಕೊಳಚೆ ಸಂಸ್ಕರಣೆಗೆ ಹೊಸ ಜೀವ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.