
ಪ್ರಯಾಗ್ರಾಜ್: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ ಸಂತರು ಮತ್ತು ಸ್ವಾಮೀಜಿಗಳು ಭಾರತೀಯ ಪೌರತ್ವ ಪಡೆಯಲು ಸುಮಾರು 1.5 ಕೋಟಿ ಹಿಂದೂ ನಿರಾಶ್ರಿತರಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕಾರಣಕ್ಕಾಗಿ ವಿವಿಧ ದೇವಾಲಯಗಳಲ್ಲಿ, ಮಠಗಳಲ್ಲಿ, ಆಶ್ರಮಗಳಲ್ಲಿ ಮತ್ತು ಪೀಠಗಳಲ್ಲಿ ಕೌಂಟರ್ಗಳನ್ನು ತೆರೆಯುವುದಾಗಿ ಮತ್ತು ಅವರ ಅನುಯಾಯಿಗಳು ಈ ಕೌಂಟರ್ಗಳನ್ನು ನೋಡಿಕೊಳ್ಳಲಿದ್ದಾರೆ ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಸಂತ ಸಮ್ಮೇಳನ’ದಲ್ಲಿ ಸಂತರು ಘೋಷಿಸಿದ್ದಾರೆ.
ಅಖಿಲ ಭಾರತೀಯ ಸಂಸತ್ ಸಮಿತಿಯ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು ಮಾತನಾಡಿ, ಹೆಚ್ಚಿನ ಯುವ ಸನ್ಯಾಸಿಗಳು ಸುಶಿಕ್ಷಿತರಾಗಿರುವುದರಿಂದ, ಅವರು ಹಿಂದೂ ನಿರಾಶ್ರಿತರಿಗೆ ಪೌರತ್ವ ಪಡೆಯಲು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.
“ಯುವ ಸನ್ಯಾಸಿಗಳು ತಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಬಳಸಿ ನಿರಾಶ್ರಿತರಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ. ಸುಮಾರು ಒಂಬತ್ತು ಲಕ್ಷ ದೇವಾಲಯಗಳು ಮತ್ತು 1.75 ಲಕ್ಷಕ್ಕೂ ಹೆಚ್ಚು ಸಂತರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಅವರು ಹೇಳಿದರು.
ವಿಎಚ್ಪಿ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿ, ವಿಎಚ್ಪಿ ಸ್ವಯಂಸೇವಕರು ಸಹ ಗುಂಪುಗಳನ್ನು ರಚಿಸಲಿದ್ದಾರೆ ಮತ್ತು ವಿವಿಧ ನಗರಗಳಲ್ಲಿನ ಹಿಂದೂ ನಿರಾಶ್ರಿತರನ್ನು ಗುರುತಿಸಲಿದ್ದಾರೆ ಮತ್ತು ಪೌರತ್ವಕ್ಕಾಗಿ ಸಂಪೂರ್ಣ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡಲಿದ್ದಾರೆ ಎಂದಿದ್ದಾರೆ.
ಈ ಅಭಿಯಾನವನ್ನು ದೇಶದಲ್ಲಿ ಎರಡು ತಿಂಗಳುಗಳ ಕಾಲ, ವಿಶೇಷವಾಗಿ ಸಿಎಎ ಜಾರಿಗೆ ತರಲು ನಿರಾಕರಿಸುತ್ತಿರುವ ರಾಜ್ಯಗಳಲ್ಲಿ ನಡೆಸಲಾಗುವುದು ಎಂದು ಸಂತರು ಹೇಳಿದ್ದಾರೆ.
ಸಂತರು ಮತ್ತು ಸನ್ಯಾಸಿಗಳು ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.
ಸಿಎಎ ಜೊತೆಗೆ, ದೇಶದ ಹಿಂದೂಗಳನ್ನು ಒಂದುಗೂಡಿಸಲು, ಜಾತಿ ಆಧಾರಿತ ತಾರತಮ್ಯವನ್ನು ಕೊನೆಗಾಣಿಸಲು ಸಂತರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



